ಕೊರಗಜ್ಜ ಮತ್ತು ಕೊರಗರು ಚರಣ್ ಐವರ್ನಾಡು ತುಳುನಾಡಿನ ಪ್ರಭಾವಿ ದೈವವಾದ ಕೊರಗಜ್ಜ ಎಂದು ಕರೆಯಲ್ಪಡುವ ಕೊರಗ ತನಿಯನ ಪವಾಡಗಳು, ಮಹಿಮೆಗಳು ಇತ್ತೀಚೆಗೆ ಹೆಚ್ಚು ಪ್ರಚಾರಗೊಳ್ಳುತ್ತಿವೆ. ಮಂಗಳೂರಿನ ರಸ್ತೆಗಳಲ್ಲಿ ಹೋಗುವಾಗ ದಾರಿ ಬದಿಯಲ್ಲಿ ಅನೇಕ ಕೊರಗಜ್ಜನ ಕಟ್ಟೆಗಳು ಕಂಡುಬರುತ್ತವೆ, ಕೊರಗ ತನಿಯನನ್ನು ಹೊಗಳುವ, ಹಾಡುವ ಭಕ್ತಿಗೀತೆಗಳು ಬರುತ್ತಿವೆ. ಅವನ ಸ್ಟಿಕ್ಕರ್‍ಗಳು ವಾಹನಗಳಲ್ಲಿ ಕಂಡು ಬರುತ್ತವೆ. ಒಂದು ವಾರದ ಹಿಂದೆ ಸಿವಿಲ್ ಸರ್ವಿಸ್ ಮಾಡುತ್ತಿರುವ ಮಿತ್ರರೊಬ್ಬರು ಫೋನ್ ಮಾಡಿ ಅವರ ದೊಡ್ಡ ಹರಕೆಯ ಸಲುವಾಗಿ ಕೊರಗಜ್ಜನಿಗೆ ಒಂದು ದುಬಾರಿ ವಿಸ್ಕಿ ಇಡುವುದಾಗಿ ಹೇಳಿದರು. ನನಗೆ ನಗುವೂ ಬರಲಿಲ್ಲ. ಹರಕೆ ದೊಡ್ಡದಾದಂತೆ ಭಕ್ತನ ಕುಪ್ಪಿಯ ಬೆಲೆಯೂ ಜಾಸ್ತಿಯಾಗುತ್ತಿದೆ. ಇದನ್ನು ಬರೆಯುತ್ತಿದ್ದಂತೆ ಮಂಗಳೂರು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀಮತಿ ಸಬಿತಾ ಕೊರಗ ಅವರು ಒಂದು ಮೆಸೆಜ್ ಕಳುಹಿಸಿದರು. ಉಡುಪಿಯ ಎಂ.ಜಿ.ಎಂ ಪಕ್ಕದ ಕೊರಗಜ್ಜನ ಗುಡಿಯ ಪಕ್ಕ ಆಮೆ ಪ್ರತ್ಯಕ್ಷವಾಗಿದೆ. ಈಗ ಆಮೆ ಕೊರಗಜ್ಜನ ವಾಹನವಾಗಿದೆ. (ಇನ್ನು ಆಮೆಯನ್ನು ಕೊಂದು ತಿನ್ನುವಂತಿಲ್ಲ). ಆಮೆ ಕೊರಗಜ್ಜನಿಗೆ ಯಾವಾಗ ವಾಹನವಾದದ್ದು ಎಂಬುದು ಗೊತ್ತಿಲ್ಲ!?! ಇನ್ನೊಂದು ಕಡೆ ಕೊರಗಜ್ಜನ ಹೆಸರನ್ನು ಹದಿನೈದು ಜನರಿಗೆ ಕಳುಹಿಸಿ ಪುಣ್ಯ ಸಂಪಾದಿಸುವ ಭಕ್ತ ವೃಂದ ಸೃಷ್ಟಿಯಾಗಿದೆ. ಕರಾವಳಿಯ ಸಂಸ್ಕøತಿಗಳ ಅಮೂಲಾಗ್ರವಾದ ಬದಲಾ...