ಯೋಗ ಅಂತಾರಾಷ್ಟ್ರೀಯ ಸರಕು ಆದಾಗ ಯೌಗಿಕ ದರ್ಶನಗಳಿಗೆ ಭಾರತದಲ್ಲಿ ಬೆಲೆ ಇಲ್ಲದಾಗಿದೆ ! GorakhaNatha of Kadri Manjunatha Temple ಕಳೆದ ಒಂದು ದಶಕದಿಂದ ಯೋಗ ಪ್ರಪಂಚಕ್ಕೆ ಪರಿಚಯ ಆಗಿದೆ ಎಂಬ ದೊಡ್ಡ ಸುಳ್ಳನ್ನು ನಮ್ಮ ನಡುವೆ ಹರಿಯಬಿಡಲಾಗಿದೆ. ಆದರೆ ಭಾರತದಲ್ಲಿ ಯೋಗವನ್ನು ಉಚ್ಛ್ರಯಕ್ಕೆ ಕೊಂಡೊಯ್ದ ದಾರ್ಶನಿಕರನ್ನು ಭಾರತದ ಇತಿಹಾಸದಿಂದ ಮರೆಮಾಚಲಾಗಿದೆ ಮಾತ್ರವಲ್ಲ ಅದನ್ನು ಭಾರತೀಯ ಸಂಸ್ಕೃತಿಯ ಬಗೆಗಿನ ಚರ್ಚೆಯಲ್ಲಿ ನಿರ್ಲಕ್ಷ ಮಾಡಲಾಗಿದೆ. ಅದಕ್ಕೂ ಹೆಚ್ಚಾಗಿ ಯೌಗಿಕ ಮೂಲದ ಪಂಥಗಳ ಆರಾಧನಾ ನೆಲೆಗಳು ಅಮೂಲಾಗ್ರವಾಗಿ ವೈದಿಕ ಕ್ಷೇತ್ರಗಳಾಗಿ ಬದಲಾಗಿವೆ. ಭಾರತದಲ್ಲಿ ಇಂದು ಪ್ರಚಾರದಲ್ಲಿರುವ ಹಾಗೆ ಯೋಗ ಎಂಬುದು ಬರಿಯ ದೇಹವನ್ನು ಬಗ್ಗಿಸುವ ವ್ಯಾಯಾಮ ಅಥವಾ ಉಸಿರಿನ ಜೊತೆ ಕಸರತ್ತು ಮಾಡುವುದು ಅಲ್ಲ. ಅದರಾಚೆಗೆ ಯೋಗ ಬಹು ಸಮುದಾಯಗಳ ನಡುವೆ ಹೋಗಿತ್ತು. ವಿಸ್ತಾರವಾಗಿ ಬೆಳೆಸಿದ್ದು ವೈದಿಕವಲ್ಲ, ಬದಲಾಗಿ ಅವೈದಿಕ ಮತ್ತು ನಾಸ್ತಿಕ ಪರಂಪರೆಗಳು. ಯೋಗದ ಮಹಾನ್ ಗುರುಗಳಾದ ನಾಥ/ ವಜ್ರಾಯನದ (ಬೌದ್ಧ) ಗೋರಖ, ಮಚ್ಚೆಂದ್ರ ನಾಥರು ಇಂದು ಯೋಗದ ದಿನ ನಮಗೆ ನೆನಪಿಗೆ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಯೋಗ ಎಂಬುದು ದೇಹ ಬಗ್ಗಿಸುವ ಕ್ರಿಯೆ ಎಂಬ ನಮ್ಮ ನಿಲುವು. ಹಾಗಾಗಿ ನಮಗೆ ಅದನ್ನು ಮಾರ್ಕೆಟ್ ಮಾಡುವ ಇಂದಿನ ಧಾರ್ಮಿಕ ನಾಯಕರು ಮುಖ್ಯರಾಗುತ್ತಾರೆ. ಯೋಗದ ಬಗ್ಗೆ ಮಾತನಾಡುವ, happy yoga day ಎಂದು ಬರೆದ...