ಕೆಂಡದ ಮೇಲಾಡುವ ದೈವ - ಒತ್ತೆಕೋಲ ಚರ ಣ್ ಐವರ್ನಾಡು Vishnumurthy theyyam ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕøತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ ಆಚರಣೆಗಳನ್ನು ಇತರ ಸಮುದಾಯಗಳು ಸ್ವೀಕರಿಸುವುದನ್ನು ಕೇರಳದ ತೆಯ್ಯಂನ ಒತ್ತೆಕೋಲವನ್ನು ತುಳುನಾಡಿನ ಸಮುದಾಯಗಳು ಸ್ವೀಕರಿಸಿದ ಬಗೆಯನ್ನು ಇಲ್ಲಿ ಉದಾಹರಿಸುತ್ತೇನೆ. ಬೇರೆ ಉದ್ದೇಶಕ್ಕಾಗಿ ಸಿದ್ದಪಡಿಸಿದ ಲೇಖನವನ್ನು ಇಲ್ಲಿ ಹಾಕಲಾಗಿದೆ ನಿಗಿ ನಿಗಿ ಕೆಂಡದ ರಾಶಿಯ ಮೇಲೆ ಸರ್ವಾಲಂಕಾರಭೂಷಿತವಾದ ದೈವವೊಂದರ ಕಾರ್ಣಿಕವನ್ನು ನೋಡಲು ದಕ್ಷಿಣಕನ್ನಡ ಮತ್ತು ಕೇರಳದ ಗಡಿ ಪ್ರದೇಶಗಳಿಗೆ ಬರಬೇಕು . ಇಲ್ಲಿತಾವು ನಂಬಿದ ದೈವ ಮೈದಳೆದು ತಮ್ಮ ಎದುರು ನಿಂತಾಗ ಭಕ್ತರು ಭಾವುಕರಾಗಿ ಮೈಮರೆಯುತ್ತಾರೆ ! ಸ್ವತಃ ಮಹಾವಿಷ್ಣು ಧರೆಗೆ ಇಳಿದು ಬರುವ ವಿಶಿಷ್ಟ ಜಾನಪದ ಆಚರಣೆ ಒತ್ತೆಕೋಲ ! ...