ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಯಸ್ವಿನಿಯಲ್ಲಿ ಹರಿವ ಆತ್ಮಗಳು!

ಇಮೇಜ್
ಪಯಸ್ವಿನಿ ಹಿಂದೆ ನೋಡಿದ್ದಕ್ಕಿಂತ ಹೆಚ್ಚು ರಭಸದಿಂದ ಹರಿಯುತ್ತಿದ್ದಳು. ಆತ್ಮಗಳು ಮುಕ್ತಿ ಹೊಂದಿಯೋ, ಇಲ್ಲಾ ಪೂಮಲೆಯ ಕಾಡುಗಳಲ್ಲಿರುವ ಮರಗಳನ್ನು ಸೇರಿದ ಮೇಲೆ ಉಳಿದ ನಿರ್ಜೀವ ಶರೀರಗಳ ರಕ್ತವೇ ಪಯಸ್ವಿನಿಯ ತುಂಬೆಲ್ಲಾ ಹರಿಯುತ್ತಿದೆ ಎಂಬಂತೆ ಕೆಂಪು ಕೆಂಪಾದ ನೀರು ಕೇರಳದ ಕಡೆಗೆ ಹರಿದು ಹೋಗುತ್ತಿತ್ತು. ಕೇರಳದಲ್ಲಿ ಕೆಲವು ಮಾಂತ್ರಿಕರಿದ್ದಾರೆ. ಕವಡೆ ಹಾಕಿ ಮೋಕ್ಷ ಸಿಗದ ಆತ್ಮಗಳ ಲೆಕ್ಕ ಹಾಕಿ ಮೋಕ್ಷಕ್ಕಾಗಿ ಗೋಗರೆಯುವ ಪ್ರೇತಾತ್ಮಗಳಿಗೆ ಮುಕ್ತಿ ನೀಡುತ್ತಾರೆ. ಬಹುಶಃ ಪಯಸ್ವಿನಿಯಲ್ಲಿ ಆಗೊಂದು ಈಗೊಂದು ಹರಿದು ಹೋಗುವ ಆತ್ಮಗಳಿಗೆ ಅವರು ಮುಕ್ತಿ ನೀಡಬಹುದೇನೋ.  ಹರಿದು ಹೋಗುವ ನೀರಿನಲ್ಲಿ ಕಾಲು ಇಳಿಸಿ ಆಡುವುದೆಂದರೆ ನಂಗೆ ತುಂಬಾ ಇಷ್ಟ. ಮೀನುಗಳು ಮಾತನಾಡುತ್ತವೆ. ಆದರೆ ನಾವು ಮೌನವಾಗಿರಬೇಕು! ನಮಗೆ ಅವುಗಳನ್ನು ಸ್ಪರ್ಶಿಸುವ ಹಕ್ಕಿಲ್ಲ. ಆದರೆ ಅವುಗಳಷ್ಟೇ ನಮ್ಮನ್ನು ಮುಟ್ಟಬಹುದು. ಬಲೆ ಹಾಕಿ ಮೀನು ಹಿಡಿಯುವವನಿಗೆ ಜೀವಂತ ಮೀನುಗಳು ಬೇಕಿಲ್ಲ. ಸಿಕ್ಕಿದರೂ ಸಾಯಿಸುತ್ತಾನೆ. ಮನುಷ್ಯರಲ್ಲೂ ಅಷ್ಟೇ, ಸತ್ತ ಮೇಲೆ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿ ಹಂದಿ - ಕೋಳಿ ಮಾಂಸದ ಊಟ ಮಾಡಿ ಹೆಂಡ ಕುಡಿದು ಕೈ ತೊಳೆಯುತ್ತಾರೆ. ಆದರೆ ಸಾವಿನ ಊಟದ ಮಸಾಲೆಯ ಪರಿಮಳ ಅವನ ಸಾವು ಅವನ ಬಳಿ ಬರುವ ವರೆಗೆ ಹಾಗೇ ಘಮ್ಮನೆ ಇರುತ್ತದೆ. ಆಗಾಗ ಕೈ ಮೂಸಿ ನೋಡಲು ಮರೆತಿರುತ್ತಾನೆ ಅಷ್ಟೇ! ಹಿಂದೆಲ್ಲಾ ಪಯಸ್ವಿನಿಯನ್ನು ದಾಟಿ ನಮ್ಮ ಅಜ್ಜಿಯ ಮನೆಗೆ ಬರಲು ಒಂ...