ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ!

ಇಮೇಜ್
 ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ! Third Kushan king Vima Kathphishas  standing facing, sacrificing at fire altar at left, club, tamgha and axehead-shafted trident in fields, ಕಳೆದ ವಾರ ನನಗೆ ತುಂಬಾ ಪ್ರಾಚೀನವಾದ ನಾಲ್ಕು ನಾಣ್ಯಗಳು ಸಿಕ್ಕವು. ಕೆಲವು ದಿನಗಳಿಂದ ವಿನೆಗರ್, ವಾಟೆ ಹುಳಿ ಹಾಕಿ ತೊಳೆದದ್ದೇ ತೊಳೆದದ್ದು. ಈಗ ಈ ನಾಣ್ಯಗಳು ಯಾವುದು ಎಂದು ತಿಳಿಯಲು ಸಾಧ್ಯವಾಗಿದೆ. ಇದು ಕುಷಾನರ ಮೂರನೇ ರಾಜ ವಿಮಾ ಕಡ್ ಫೀಸಸ್ ನ ನಾಣ್ಯ. ವಿಮಾ ಕಡ್ ಫೀಸಸ್ ನ ಚಿನ್ನದ ಮತ್ತು ತಾಮ್ರದ ನಾಣ್ಯಗಳು ಇವೆ. ಇವನ ನಾಣ್ಯಗಳು ಇವನನ್ನು ಶಿವಭಕ್ತ ಎಂದು ತೋರಿಸುತ್ತವೆ. ಸಧ್ಯ ನನ್ನ ಬಳಿ ಎರಡು ನಾಣ್ಯಗಳು ಇವೆ. ಇಲ್ಲಿ ನೀಡಿರುವ ನಾಣ್ಯದ ಒಂದು ಬದಿ ಕೋಟು ತೊಟ್ಟು ಕೈಯಲ್ಲಿ ಆಯುಧ ಹಿಡಿದ ವ್ಯಕ್ತಿ ಇದ್ದಾನೆ. ಹಿಂದೆ ನಂದಿಯ ಕುಂಡೆ ಇರುವುದರಿಂದ ಅದರ ಜೊತೆಗೆ ನಿಂತಿರುವ ವ್ಯಕ್ತಿಯ ತಲೆ ಕೂಡ ನೋಡಬಹುದು. ನಿಂತಿರುವ ವ್ಯಕ್ತಿ ವಿಮಾ ಕಡ್ ಫೀಸಸ್ ಮತ್ತು ನಂದಿಯ ಜೊತೆಗೆ ಇರುವವನು ಶಿವ! ಇದು ಸುಮಾರು 1900 ವರ್ಷಗಳ ಹಳೆಯ ನಾಣ್ಯ! ಆದರೆ ಅಕ್ಷರಗಳು ಅಸ್ಪಷ್ಟ. Siva standing facing, holding trident and deerskin, bull Nandi right behind,ption ಕುಜುಲ ಕಡ್ ‍ ಫೀಸಿಸ (ಸಾಮಾನ್ಯ ಶಕ. 30-80) ವಿಮಾ ಟಕ್ಟು (ಸಾಮಾನ್ಯ ಶಕ 80-95) ನಂತರ ಆಳಿದ ವಿಮ ಕಡ್ ‍ ಫೀಸಿಸನ (ಸಾಮಾನ್ಯ ಶಕ...

Arebase: A dialect rooted in harmony

ಇಮೇಜ್
Arebase: A dialect rooted in harmony Charan Aivarnad Purusha Daiva, Kannada Speaking deity worshipped in the form of Daivaradhana in Sullia region Karnataka teems with different versions of Kannada. There are more than 30 dialects of the language, which contribute to the linguistic richness of present-day Karnataka. Kavirajamarga, the earliest available work on rhetoric, grammar and poetics in Kannada, from the 9th century CE, speaks of the two major dialectic divisions of Kannada: Dakshina and Uttara. Sri Vijaya, the author of Kavirajamarga alludes to many varieties of Kannada, hinted at by the use of the phrase “Kannadangal”. Today, traditional linguists broadly classify Kannada into four geographical regions: Mysuru, Mangaluru, Dharwad and Kalaburagi Kannada. In these regions, various communities use a specific dialect as their mother tongue, whether it is Halakki Kannada, Havyaka Kannada, Kota Kannada, Rama Kshatriya Kannada, Badaga Kannada (spoken by the Badaga community in the Ni...

ಕನ್ನಡಂಗಳಲ್ಲಿ ಅರೆಭಾಷೆ

ಇಮೇಜ್
ಅರೆಭಾಷೆಯನ್ನು ಕನ್ನಡದ ಪ್ರಬೇಧ ಎಂದು ಬಗೆದರೂ ಇದು ಸಾಂಸ್ಕøತಿಕವಾಗಿ ಇತರ ಕನ್ನಡಗಳಿಂದ ಅನನ್ಯತೆಯನ್ನು ಕಾಯ್ದುಕೊಳ್ಳುವುದರಿಂದಾಗಿ ನಾನು ಇದನ್ನು ಅಧ್ಯಯನ ಕಾರಣಕ್ಕೆ ಹೊರತುಪಡಿಸಿ ಉಪಭಾಷೆ (ಡೈಲೆಕ್ಟ್) ಎಂದು ಕರೆಯುವ ಬಗ್ಗೆ ತಕರಾರು ಮಾಡುತ್ತೇನೆ.  ಒಂದು ಭಾಷೆ ಸಂಸ್ಕøತಿಯ ಮೂಲಕ ಸಂವಹನ ನಡೆಸುವಂತೆ ಸಂಸ್ಕøತಿಯೂ ಭಾಷೆಯ ಮೂಲಕ ಸಂವಹನ ನಡೆಸುತ್ತದೆ. ಭಾಷೆಯಿಲ್ಲದೆ ಸಂಸ್ಕøತಿಗೆ ಉಳಿಗಾಲವಿಲ್ಲ. ಹಾಗಾಗಿ ಭಾಷೆಯನ್ನು ಕಲಿಯುವುದು ಎಂದರೆ ಸಂವಹನದ ಆಚೆಗೆ ಅದರ ಸಂಸ್ಕøತಿಯನ್ನು ಅರಿಯುವ ಯತ್ನ ಎಂದೇ ಭಾವಿಸಬೇಕು. ಅರೆಭಾಷೆ ಒಂದುಸಮುದಾಯದ ಭಾಷೆ. ಆದರೆ ಒಂದು ಭಾಷೆ ಸಮುದಾಯ, ಧರ್ಮಗಳ ಆವರಣವನ್ನು ಮೀರದೇ ಇದ್ದರೆ ಉಳಿಯುವುದಿಲ್ಲ. ಅರೆಭಾಷೆ ಪ್ರಸಕ್ತ ಸಂದರ್ಭದಲ್ಲಿ ಈ ಮಿತಿಗಳನ್ನು ಮೀರುವ ಪ್ರಜ್ಞೆಯನ್ನು ಬೆಳೆಸಿಕೊಂಡಿದೆ.  ಹೀಗಾಗಿ ಅರೆಭಾಷೆಯ ಬಗ್ಗೆ ನಾನು ಮಾಡಿದ ಒಂದು ಟಿಪ್ಪಣಿಯನ್ನು ಇಲ್ಲಿ ನೀಡಿದ್ದೇನೆ. ಭಾಷೆಯ ಬಗ್ಗೆ ಚರ್ಚೆಯನ್ನು ಬೆಳೆಸಲು ಉಪಯೋಗವಾಗಬಹುದು ಎಂದು ನಂಬಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ವಿಟ್ಲ, ಕೇರಳದ ಕಾಸರಗೋಡು ಮತ್ತು ಕೊಡಗಿನ ಅನೇಕ ಕಡೆ ವಾಸಿಸುವ ಗೌಡರದ್ದು ಈ ಭಾಗಗಳ ಪ್ರಭಾವಿ ಸಮುದಾಯ. ಇವರು ಹಾಸನ ಪರಿಸರದ ಐಗೂರು ಸೀಮೆಯಿಂದ ಕ್ರಿ.ಶ 1450-1600ರ ಮಧ್ಯೆ ಕರಾವಳಿಗೆ ವಲಸೆ ಬಂದಿದ್ದಾರೆ.                  ...

ಮರುದೈ ವೀರನ್ - ಪ್ರಭುತ್ವದ ಅನ್ಯಾಯಕ್ಕೆ ಬಲಿಯಾದ ತಮಿಳು ವೀರನ ಕಥೆ

ಇಮೇಜ್
ನಮ್ಮ ಮನೆಯ ಮುಂದಿನ ಗುಡ್ಡದ ಆಚೆ ತಮಿಳು ಮಾತನಾಡುವ ಸಮುದಾಯ ಒಂದಿದೆ. ಎಂಬತ್ತರ ದಶಕದಲ್ಲಿ ಈ ಭಾಗಕ್ಕೆ ಬಂದವರು. ಅವರು ಮಾರಿಯಮ್ಮನಿಗೆ ಗುಡಿ ಕಟ್ಟಿ ಆರಾಧಿಸುತ್ತಿದ್ದಾರೆ. ಅದು ಕೆಲವು ವರ್ಷಗಳ ವರೆಗೆ ಜೀರ್ಣಾವಸ್ತೆಯಲ್ಲಿಯೇ ಇತ್ತು. ಇತ್ತೀಚೆಗೆ ಹೊಸ ದೇಗುಲ ಸಂಕೀರ್ಣ ಕಟ್ಟಿ ಗಣಪತಿ ಮೊದಲಾದ ದೇವತೆಗಳನ್ನೂ ಪ್ರತಿಷ್ಠಾಪಿಸಿ ಪ್ರಾಣಿ ಬಲಿ ಕೇಳುವ ದೇವತೆಗಳಿಗೆ ಬ್ರಾಹ್ಮಣ ಅರ್ಚಕರಿಂದ ಪೂಜೆಯ ವ್ಯವಸ್ಥೆ ಮಾಡಿದ್ದಾರೆ. ಇವರು ತಮ್ಮ ಕುಟುಂಬದ ರಕ್ಷಣೆಯ ದೈವ ಎಂದು ಗುಡ್ಡದ ತುದಿಯಲ್ಲಿ ಕಲ್ಲು ಹಾಕಿ ಒಂದು ದೇವತೆಗೆ ಆರಾಧನೆ ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಆಡು ತಲೆ ಕಡಿದು ಅದರ ಮಾಂಸದಿಂದ ಮಾಡಿದ ಅಡುಗೆಯ ಎಡೆ ಇಡುತ್ತಾರೆ. ಯಾರು ಈ ಮರುದೈ ವೀರನ್? ಅದು ಮರುದೈ ವೀರನ್ ಎಂಬ ದೇವತೆಯ ಕಲ್ಲು. ಆರಾಧನೆ ಮಾಡುವಾಗ ಮರುದೈ ವೀರನ್ ಪಾತ್ರಿಯ ಮೇಲೆ ಅವಾಹನೆಯಾಗಿ ಕತ್ತಿಯ ಮೇಲೆ ನಿಲ್ಲುವ, ಹುರಿ ಹಗ್ಗದಿಂದ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದುಕೊಳ್ಳುವ, ಚರ್ಮದ ವಾದ್ಯ ಭಾರಿಸುವ ಮತ್ತು ಎಲ್ಲಾ ಭಕ್ತರಿಗೂ ಭಸ್ಮದ ಉದ್ದದ ನಾಮ ಹಾಕುವ ಕ್ರಮ ನಡೆಯುತ್ತದೆ. ಇದನ್ನು ಮಾಡುವಾಗ ತುಳುವಿನ ದೈವಗಳು ಹಾಡುವ ಪಾಡ್ಡನದಂತಹ ಹಾಡು ನಿರರ್ಗಳವಾಗಿ ಲಯಬದ್ಧವಾಗಿ ಹಾಡುತ್ತಾರೆ. ಮರುದೈ ವೀರನ್ ಒಬ್ಬ ಐತಿಹಾಸಿಕ ಪುರುಷ. ಇವನು ಮಧುರೆಯ ಒಬ್ಬ ವೀರ ಸೈನಿಕ. ಜಾನಪದರ ಬಾಯಲ್ಲಿ ಇವನು ಮರುದೈ ವೀರನ್ ಆಗಿದ್ದಾನೆ. ಇವರನ್ನು ನಿಯಂತ್ರಿಸಲು ರಾಜ ತಿರುಮಲೈ ನಾಯಗರ್ ಮರ ಕಡ...