ಆರಿಕಲ್ಲು ದಿಗಂಬರ ಜೈನ ಬಸದಿ Arikal Digambara Jaina Basadi of Kadeshvalya, Bantwal ನನ್ನ ಮಿತ್ರ ಆಝಾದ್ ಖಂಡಿಗ ಬೆಳೆಯುತ್ತಾ ತನ್ನ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೆಸರು ಮಾಡುತ್ತಿರುವ ಪತ್ರಕರ್ತ. ಕನ್ನಡ ಪತ್ರಿಕೆಗಳಲ್ಲಿ ಫೇಸ್ಬುಕ್ ಅನ್ನು ಸಮರ್ಪಕವಾಗಿ ಬಳಸಿ ವರದಿ ಮಾಡುವ ಆಝಾದ್ ಮಂಗಳೂರಿನ ಅಪರೂಪದ ವ್ಯಕ್ತಿಗಳ ಮೇಲೆ ಸಣ್ಣ ಸಣ್ಣ ಡಾಕ್ಯುಮೆಂಟರಿಗಳನ್ನು ಮಾಡಿ ವರದಿ ಮಾಡುತ್ತಿದ್ದರು. ನನ್ನ ಸಮಕಾಲೀನರಾದ ಪತ್ರಕರ್ತರಲ್ಲಿ ಇವರು ಪ್ರಬುದ್ಧ ಆಲೋಚನೆ ಇರುವವರು. ಚೆನ್ನಾಗಿ ಓದುತ್ತಾರೆ, ರಂಗ ಭೂಮಿಯ ಹಿನ್ನಲೆ ಇರುವವರು. ಮೊನ್ನೆ ಕಲ್ಕತ್ತಾದ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡ ಬ್ಯಾರಿ ಭಾಷೆಯ ಚಲನಚಿತ್ರದಲ್ಲಿ ನಟಿಸಿದ್ದಾರೆ. (ಒಳ್ಳೆಯ ಕೆಲಸ ಮಾಡುವ ನಮ್ಮವರ ಬಗ್ಗೆ ನಾವು ಮಾತನಾಡಬೇಕು 😜 ) ನಾನು ಮತ್ತು ಅಜಾದ್ ದಿಡೀರ್ ಎಂದು ರಾತ್ರೆ ಹಗಲು ಮಳೆ ಬಿಸಿಲು ಎನ್ನದೆ ಊರು ಸುತ್ತಲು ಹೋಗುವ ಹುಚ್ಚರು. ಕೆಲವು ದಿನಗಳ ಹಿಂದೆ "ನಿಮಗೊಂದು ಬಸದಿ ತೋರಿಸಬೇಕು...ಬನ್ನಿ.." ಅಂತ ಅವರ ಊರು "ಕಡೇಶ್ವಲ್ಯದ ಅಜಿಲ ಮೊಗರಿಗೆ" ಕರ್ಕೊಂಡು ಹೋದ್ರು. ನಮ್ಮ ಜೊತೆ ಅವಿನಾಶ್ ಕಡೇಶ್ವಲ್ಯ ಕೂಡಾ ಇದ್ದರು. ಮನೆಯಲ್ಲಿ ಕೋಳಿ, ಮೀನು ಏನೇನೋ ಗಮ್ಮತ್ತು ಮಾಡಿದ್ದರು 🥴 ಈಗ ಬಸದಿಗೆ ಬನ್ನಿ....