ಪೋಸ್ಟ್‌ಗಳು

ಜನವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ವಿಶ್ವವಿದ್ಯಾನಿಲಯಗಳಿಗೆ ಏನಾಗುತ್ತಿದೆ? ಅಹಮದಾಬಾದ್ ವಿಶ್ವವಿದ್ಯಾನಿಲಯದ ಮಾನವಿಕ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ಗಾಂಧಿ ಚಳಿಗಾಲದ ಶಾಲೆಯ ( Gandhi Winter School )ನಿರ್ದೇಶಕರಾಗಿ ನೇಮಕರಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಅ.16ರಂದು ಅವರ ನೇಮಕಾತಿಯಾದ್ದು ಅ.19ರಂದು ಅವರ ಆಯ್ಕೆಯನ್ನು ವಿರೋಧಿಸಿ ಅಭಾವಿಪದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರ ಆರೋಪಗಳು ಬಹಳ ವಿಚಿತ್ರವಾಗಿವೆ. ರಾಮಚಂದ್ರರನ್ನು ದೇಶದ್ರೋಹಿ ಎಂದು ಕರೆಯಲಾಗಿದೆ. ಹಿರಿಯ ಪ್ರಾಧ್ಯಾಪಕರೋರ್ವರು ಗುಹಾರನ್ನು ಗುಜರಾತ್‍ನಲ್ಲಿ ಪಾಠ ಮಾಡಲು ಬಿಡುವುದಿಲ್ಲ, ಅವರು ಮೋದಿ ವಿರೋಧಿ ಎಂದು ಮಿರರ್‍ಗೆ ಹೇಳಿದ್ದಾರೆ! ಈ ಬೆಳವಣಿಗೆಗಳನ್ನು ಕಂಡ ರಾಮಚಂದ್ರ ಗುಹಾ  "ಪರಿಸ್ಥಿತಿ ತನ್ನ ನಿಯಂತ್ರಣವನ್ನು ಮೀರಿರುವುದರಿಂದ ನಾನು ಅಹಮದಾಬಾದ್ ವಿವಿಯನ್ನು ಸೇರುವುದಿಲ್ಲ" ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ರಾಮಚಂದ್ರ ಗುಹಾರನ್ನು ಟೀಕಿಸುವ ವರ್ಗವು ಅವರನ್ನು ಕಮ್ಯುನಿಸ್ಟ್ ಎಂದು ಕರೆದಿದೆ. ಆದರೆ ಗುಹಾ ತಮ್ಮ ಅನೇಕ ಬರಹಗಳಲ್ಲಿ ಕಮ್ಯನಿಸ್ಟರನ್ನೂ ಟೀಕಿಸಿದ್ದಿದೆ. ನಮ್ಮ ಮುಂದಿರುವ ಪ್ರಶ್ನೆಯೆಂದರೆ ರಾಮಚಂದ್ರ ಗುಹಾರಂತಹ ಜಾಗತಿಕ ಮಟ್ಟದ ಚಿಂತಕರನ್ನು ಒಂದು ವಿಶ್ವವಿದ್ಯಾನಿಲಯ  ಹೊಂದುವುದು ತಪ್ಪೇ? ಅವರಿಗೆ ಆ ಸ್ಥಾನವನ್ನು ತುಂಬುವ ಯೋಗ್ಯತೆ ಇಲ್ಲವೇ? ದೆಹಲಿ ವಿಶ...
ಇಮೇಜ್
ರಾಜಕಾರಣಿಗಳ ಭಾಷೆಕಲುಷಿತಗೊಂಡಿದೆ! ಕಾಂಗ್ರೇಸಿನ ಹಿರಿಯ ನಾಯಕ ಮತ್ತು ನಟರಾಜ್ ಬಬ್ಬರ್ ಮಧ್ಯಪ್ರದೇಶದ ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರತಾಯಿ ಹೀರಾಬೆನ್‍ರ ವಯಸ್ಸನ್ನು ಮೌಲ್ಯ ಕುಸಿದ ರುಪಾಯಿಗೆ ಹೋಲಿಸಿ ವಿವಾದವನ್ನು ಸೃಷ್ಟಿಸಿದ್ದಾರೆ, ಪ್ರಧಾನಿಗಳು ತಮ್ಮತಾಯಿಗೆರಾಜಕೀಯದಗಂಧ ಗಾಳಿ ಗೊತ್ತಿಲ್ಲವೆಂದೂ, ಅವರನ್ನುರಾಜಕೀಯದಲ್ಲಿಎಳೆದು ತರಬೇಡಿ ಎಂದು ಟೀಕಿಸಿದ್ದಾರೆ. ರಾಜ್ ಬಬ್ಬರ್ ಹೇಳಿಕೆ ಸಮರ್ಥನೀಯವಾದುದಲ್ಲ. ಮನುಷ್ಯನ ವಯಸ್ಸು ಮತ್ತುದೈಹಿಕ ಸ್ಥಿತಿಯನ್ನು ಟೀಕಿಸುವುದು ಸಭ್ಯ ಸಂಸ್ಕøತಿಯಲ್ಲ. ಇದು ಹಿರಿಯ  ಮಹಿಳೆಯೋರ್ವರಿಗೆ ತೋರಿದ  ಅಗೌರವ. 2013 ಜುಲೈನಲ್ಲಿ ನರೇಂದ್ರ ಮೋದಿಯವರುಯುಪಿಎ ಸರಕಾರದ ಸಂದರ್ಭದಲ್ಲಿ ಡಾಲರ್‍ ಎದುರು ರುಪಾಯಿ ಬೆಲೆ 60.5 ಆದಾಗ ಇದೇ ಟೀಕೆಯನ್ನು ಮಾಡಿದ್ದರು.  ಎಂಬತ್ತು ವರ್ಷ ಪ್ರಾಯದ ಮನಮೋಹನ್ ಸಿಂಗ್‍ರ ವಯಸ್ಸಿಗೆ ರುಪಾಯಿ ಬೆಲೆ ಏರುತ್ತದೆ ಎಂದು ಮೋದಿಯವರು ಟೀಕಿಸಿದ್ದರು. ಇದನ್ನೇ ತಿರುಗು ಬಾಣವಾಗಿರಾಜ್ ಬಬ್ಬರ್‍ ಎಸೆದು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯ ನಾಯಕ ಮಾತುಗಳು, ಭಾಷಣಗಳು ನೈತಿಕತೆ ಮತ್ತು ಪ್ರೌಢಿಮೆಯನ್ನು ಕಳೆದುಕೊಂಡು ವೈಯಕ್ತಿಕವಾಗಿ ಜರೆಯುವ ವರೆಗೆ ಬೆಳೆದಿದೆ. ವಿವೇಚನೆ ಮಾಡದೆ ಸುಳ್ಳು, ತಿರುಚಿದ, ಪ್ರಚೋದಕ ಮತ್ತು ಕೀಳು ಮಟ್ಟದ ಹೇಳಿಕೆಗಳನ್ನು ನೀಡಲು ಹಿಂಜರಿಯುತ್ತಿಲ್ಲ. ಚುನಾವಣಾ ಪ್ರಚಾರಗಳು ತಮ್ಮ ಸಾಧನೆಗಳನ್ನು ಹೇಳಿ ಎದುರು...
ಇಮೇಜ್
ರಾಜಕಾರಣದ ರಾಮನ ನೆಪದಲ್ಲಿ.. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ‘ರಾಮ ಜಪ’ ತಾರಕಕ್ಕೇರಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಡುವುದು ಬಿಜೆಪಿಯ ಪ್ರಚಾರದ ಮುಖ್ಯ  ವಿಚಾರವಾಗಿತ್ತು. ಗೆದ್ದ ನಂತರ ರಾಮನ ನೆನಪಾಗದಿದ್ದವರಿಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲಿ ರಾಮಮಂದಿರದ ನಿರ್ಮಾಣದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ನಡೆದ ‘ಸಂತ ಸಮ್ಮೇಳನ’ದಲ್ಲಿ ಮಂದಿರ ನಿರ್ಮಾಣದ ಸಂದೇಹ ಬೇಡ ಎಂದಿದ್ದಾರೆ.  ಅದೇ ಸಭೆಯಲ್ಲಿದ್ದ ‘ರಾಮ ಜನ್ಮಭೂಮಿ ನ್ಯಾಸ್ ಸಂಘಟ£'’Éಯ ಸದಸ್ಯ ರಾಮ್ ವಿಲಾಸ್ ವೇದಾಂತಿ ರಾಮ ಮಂದಿರದ ನಿರ್ಮಾಣಕ್ಕೆ ಕೋರ್ಟಿನ ಅನುಮತಿಗಾಗಿ ಕಾಯಬೇಕಿಲ್ಲ ಎಂದಿದ್ದಾರೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯಿರುವ ಸ್ಥಳದ ಕುರಿತು ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಜಾಗವನ್ನು ನಿರ್ಮೋಹಿ ಅಖಾರ ಪಂಥ, ಸುನ್ನಿ ವಕ್ಫ್ ಬೋರ್ಡ್ ಮತ್ತು ರಾಮಂದಿರಕ್ಕೆ ಭಾಗಗಳನ್ನಾಗಿ ಹಂಚಿ ಆದೇಶ ಹೊರಡಿಸಿತ್ತು. ಈ ತೀರ್ಪನ್ನು ವಿರೋಧಿಸಿ ಸುಪ್ರಿಂ ಕೋರ್ಟಿನ ಮೆಟ್ಟಿಲು ಏರಿದ್ದರು.  ಭಾರತ ಸಾಂಸ್ಕøತಿಕ ವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಮುದಾಯ ಮತ್ತು ಭಾಷೆಗಳ ಮಧ್ಯೆ ಹರಿಯಬೇಕಾದ ರಾಮ ವಿಗ್ರಹಗೊಳ್ಳುತ್ತಿದ್ದಾನೆ. ಭಾರತ ಬಹುಸಮುದಾಯಗಳು ರಾಮನನ್ನು ವಿವಿಧ...
ಇಮೇಜ್
ಗೌಪ್ಯತೆಯ ವಿಚಾರ ಬೆತ್ತಲಾದಾಗ ಉಳಿದಿದ್ದೇನು?! ಧಾರವಾಡ ಸಾಹಿತ್ಯ ಸಮ್ಮೇಳನದ ಸಮರೋಪ ಕಾರ್ಯಕ್ರಮವು ಗಲಾಟೆಯೊಂದಿಗೆ ಮುಕ್ತಾಯವಾಗಿದೆ.   ಶಿಕ್ಷಣ ತಜ್ಞ ಶಿವ ವಿಶ್ವನಾಥನ್ ಭಾರತೀಯ ಸೈನಿಕರ ಮೇಲೆ ನೀಡಿದ ಹೇಳಿಕೆಯೊಂದು ವಿರೋಧ, ಪ್ರತಿಭಟನೆಗಳಿಗೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಸಮರ್ಪಕವಾಗಿ ವರದಿಯಾಗದೆ ಅನೇಕ ಪತ್ರಿಕೆಗಳು ತಮಗೆ ಬೇಕಾದಂತೆ ವರದಿ ಮಾಡಿ ಕಿಚ್ಚಿಗೆ ತುಪ್ಪ ಸುರಿದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಕ್ಷಮೆ ಕೇಳುವಂತೆ ಒತ್ತಡವೂ ಅವರ ಮೇಲೆ ಹಾಕಲಾಗಿದೆ.   "ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು" ಎಂಬ ವಿಚಾರಗೋಷ್ಟಿಯಲ್ಲಿ ಶಿವ ವಿಶ್ವನಾಥನ್ ಹೇಳಿದ್ದು ಹೀಗೆ... "ನಾನು ಅಸ್ಸಾಂಗೆ ಬೇಟಿ ನೀಡಿದ್ದಾಗ ಮಹಿಳೆಯರು ನಮಗೆ ಶಾಂತಿ ಬೇಕು ಎಂದು ಹೇಳಿದರು. ನಾನು ಒಬ್ಬ ಶಿಕ್ಷಣ ತಜ್ಞನಾಗಿ ಸಶಸ್ತ್ರ ಸೇನೆಯ ವಿಶೇಷ ಅಧಿಕಾರದ ಬಗ್ಗೆ ಕೆಲಸ ಮಡಲು ಸೂಚಿಸಿದೆ. ಅವರು ಸೇನೆಯಿಂದ ನಡೆದ 1,500 ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳನ್ನು ದಾಖಲೀಕರಣ ಮಾಡಲು ಆರಂಭಿಸಿದರು, ಅದು ಭಯಾನಕವಾಗಿತ್ತು. ಇದು ಸೇನೆಯನ್ನು ನಾಶ ಮಾಡುತ್ತದೆ. 17 ರಿಂದ 21 ವರ್ಷದ ಒಳಗಿನವರು ಯಾವುದೇ ಪರಿವೇ ಇಲ್ಲದೆ ಅತ್ಯಾಚಾರ ಮಾಡುವುದು ಸಾಧ್ಯ ಎಂದರೆ......" ಇವರ ಮಾತುಗಳು ಮುಂದುವರಿಯುತ್ತಿದ್ದಂತೆ ಮಾಜಿ ಸೇನಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ...