ಪೋಸ್ಟ್‌ಗಳು

Bahurupi Bharatha

ಪಯಸ್ವಿನಿಯಲ್ಲಿ ಹರಿವ ಆತ್ಮಗಳು!

ಇಮೇಜ್
ಪಯಸ್ವಿನಿ ಹಿಂದೆ ನೋಡಿದ್ದಕ್ಕಿಂತ ಹೆಚ್ಚು ರಭಸದಿಂದ ಹರಿಯುತ್ತಿದ್ದಳು. ಆತ್ಮಗಳು ಮುಕ್ತಿ ಹೊಂದಿಯೋ, ಇಲ್ಲಾ ಪೂಮಲೆಯ ಕಾಡುಗಳಲ್ಲಿರುವ ಮರಗಳನ್ನು ಸೇರಿದ ಮೇಲೆ ಉಳಿದ ನಿರ್ಜೀವ ಶರೀರಗಳ ರಕ್ತವೇ ಪಯಸ್ವಿನಿಯ ತುಂಬೆಲ್ಲಾ ಹರಿಯುತ್ತಿದೆ ಎಂಬಂತೆ ಕೆಂಪು ಕೆಂಪಾದ ನೀರು ಕೇರಳದ ಕಡೆಗೆ ಹರಿದು ಹೋಗುತ್ತಿತ್ತು. ಕೇರಳದಲ್ಲಿ ಕೆಲವು ಮಾಂತ್ರಿಕರಿದ್ದಾರೆ. ಕವಡೆ ಹಾಕಿ ಮೋಕ್ಷ ಸಿಗದ ಆತ್ಮಗಳ ಲೆಕ್ಕ ಹಾಕಿ ಮೋಕ್ಷಕ್ಕಾಗಿ ಗೋಗರೆಯುವ ಪ್ರೇತಾತ್ಮಗಳಿಗೆ ಮುಕ್ತಿ ನೀಡುತ್ತಾರೆ. ಬಹುಶಃ ಪಯಸ್ವಿನಿಯಲ್ಲಿ ಆಗೊಂದು ಈಗೊಂದು ಹರಿದು ಹೋಗುವ ಆತ್ಮಗಳಿಗೆ ಅವರು ಮುಕ್ತಿ ನೀಡಬಹುದೇನೋ.  ಹರಿದು ಹೋಗುವ ನೀರಿನಲ್ಲಿ ಕಾಲು ಇಳಿಸಿ ಆಡುವುದೆಂದರೆ ನಂಗೆ ತುಂಬಾ ಇಷ್ಟ. ಮೀನುಗಳು ಮಾತನಾಡುತ್ತವೆ. ಆದರೆ ನಾವು ಮೌನವಾಗಿರಬೇಕು! ನಮಗೆ ಅವುಗಳನ್ನು ಸ್ಪರ್ಶಿಸುವ ಹಕ್ಕಿಲ್ಲ. ಆದರೆ ಅವುಗಳಷ್ಟೇ ನಮ್ಮನ್ನು ಮುಟ್ಟಬಹುದು. ಬಲೆ ಹಾಕಿ ಮೀನು ಹಿಡಿಯುವವನಿಗೆ ಜೀವಂತ ಮೀನುಗಳು ಬೇಕಿಲ್ಲ. ಸಿಕ್ಕಿದರೂ ಸಾಯಿಸುತ್ತಾನೆ. ಮನುಷ್ಯರಲ್ಲೂ ಅಷ್ಟೇ, ಸತ್ತ ಮೇಲೆ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿ ಹಂದಿ - ಕೋಳಿ ಮಾಂಸದ ಊಟ ಮಾಡಿ ಹೆಂಡ ಕುಡಿದು ಕೈ ತೊಳೆಯುತ್ತಾರೆ. ಆದರೆ ಸಾವಿನ ಊಟದ ಮಸಾಲೆಯ ಪರಿಮಳ ಅವನ ಸಾವು ಅವನ ಬಳಿ ಬರುವ ವರೆಗೆ ಹಾಗೇ ಘಮ್ಮನೆ ಇರುತ್ತದೆ. ಆಗಾಗ ಕೈ ಮೂಸಿ ನೋಡಲು ಮರೆತಿರುತ್ತಾನೆ ಅಷ್ಟೇ! ಹಿಂದೆಲ್ಲಾ ಪಯಸ್ವಿನಿಯನ್ನು ದಾಟಿ ನಮ್ಮ ಅಜ್ಜಿಯ ಮನೆಗೆ ಬರಲು ಒಂ...

ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ

ಇಮೇಜ್
  ಕದ್ರಿಯ ಲೋಕೇಶ್ವರ ಮತ್ತು ಮಂಜುನಾಥ (ತುಳುನಾಡಿನ ಬೌದ್ಧ ಕುರುಹುಗಳ ಬಗ್ಗೆ ಬರೆದ ಲೇಖನದ ಒಂದು ಭಾಗ) Avalokitheshwara, Kadri Manjunatah Temple ಕದ್ರಿಯ ಮಂಜುನಾಥ ದೇವಾಲಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಅದೊಂದು ಲಿಂಗಾರಾಧನೆಯ ಶೈವಕ್ಷೇತ್ರವಾದರೂ ಶಿವನಿಗೆ ಮಂಜುನಾಥ ಎಂಬ ಹೆಸರು ಯಾವುದೇ ಪ್ರಾಚೀನ ದಾಖಲೆಗಳಲ್ಲಿ ಇಲ್ಲ. ಗೋವಿಂದ ಪೈಗಳು ಪ್ರಾಚೀನ ಶಿವಸಹಸ್ರನಾಮದಲ್ಲೂ ಇಲ್ಲವೆನ್ನುತ್ತಾರೆ. ಕದಿರೆಯ ಮಂಜುನಾಥನೊಬ್ಬನೇ ಅಖಿಲಭಾರತದಾದ್ಯಂತ ಇರುವ ಏಕೈಕ ಮಂಜುನಾಥನ ಲಿಂಗ. ಧರ್ಮಸ್ಥಳಕ್ಕೆ ದೇವರನ್ನು ಇಲ್ಲಿಂದಲೇ ಕೊಂಡುಹೋದದ್ದು. ಶಿವನಿಗೆ ಮಂಜುನಾಥನೆಂಬ ಹೆಸರು ಬರಲು ಕಾರಣವನ್ನು ಗೋವಿಂದ ಪೈಗಳು ವಿಸ್ತøತವಾಗಿ ಹೀಗೆ ಚರ್ಚಿಸುತ್ತರೆ. ಮಂಜುಶ್ರೀ ಅಥವಾ ಮಂಜುಘೋಷನೆಂಬ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಇದ್ದದ್ದು ಮಹಾಯನದ ಕೃತಿಗಳಿಂದ ತಿಳಿದು ಬರುತ್ತದೆ. ನೇಪಾಳದ ಬೌದ್ಧಕವಿ ಅಮೃತಾನಂದನ ಕಲ್ಯಾಣಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ.......ಸ್ವಸ್ತೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ......ಎಂದಿದೆ. ಮಂಜುನಾಥವೆಂಬುದು ಕದ್ರಿಯ ಗುರು ಮಚ್ಚೇಂದ್ರನಾಥನಿಂದಲೂ ಬಂದಿರಬಹುದು. ಮಚ್ಚಿನಾಥವೇ ಮಂಜುನಾಥವಾಗಿರಹುದೆಂಬ ಚರ್ಚೆಯೂ ಇದೆ. ದೇವಾಲಯದ ಗರ್ಭಗುಡಿಯ ಹೊರ ಅಂತಃಪ್ರಾಕಾರದಲ್ಲಿ ಅತ್ಯಂತ ಸುಂದರವಾದ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಇದನ್ನು ಅರ್ಚಕರು ತ್ರಿಲೋಕೇಶ್ವರನೆಂದು ಕರೆಯುತ್ತಾರೆ. ಅಡಿ...

ಬಳ್ಪ ತ್ರಿಶೂಲಿನಿ ದೇವಾಲಯ- ಶಾಕ್ತ ಕ್ಷೇತ್ರ

ಇಮೇಜ್
ಬಳ್ಪ ತ್ರಿಶೂಲಿನಿ ದೇವಾಲಯ- ಶಾಕ್ತ ಕ್ಷೇತ್ರ ಈಗ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಇರುವ ತ್ರಿಶೂಲಿನಿ ದೇವಾಲಯ ಒಂದು ಶಾಕ್ತ ಕ್ಷೇತ್ರ. ಇಲ್ಲಿ ಶಕ್ತಿಯನ್ನು ಶಿಲೆಯ ತ್ರಿಶೂಲದ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿರುವ ಲಕುಲೀಶನ, ಮೈಥುನದ ಕೆತ್ತನೆಗಳು ಇದರ ತಾಂತ್ರಿಕ ಹಿನ್ನಲೆಯನ್ನು ತೋರಿಸುತ್ತದೆ. ಇದರ ಸುತ್ತು ಪೌಳಿ ವಿಜಯನಗರ ರಾಜರ ಕೊಡುಗೆಯಾದರೆ ಸುಖಾಸಿನಿ, ತೀರ್ಥ ಮಂಟಪ, ಗರ್ಭಗೃಹ ಆಳುಪ ಮತ್ತು ಕದಂಬ ವಾಸ್ತುಶಿಲ್ಪವನ್ನು ಹೋಲುತ್ತದೆ. ಈ ದೇವಾಲಯಕ್ಕೆ ವಿಜಯನಗರದ ದೇವರಾಯ ಒಡೆಯ 1493 ರಲ್ಲಿ ಕೊಡುಗೆಗಳನ್ನು ನೀಡಿದ್ದಾನೆ. ಇಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದ ಮುಂದೆ ಕೊಡಗಿನ ಹಾಲೇರಿ ಅರಸರ ಶಾಸನ ಕೂಡ ಇದೆ. Inscription of Kodagu Haleri King ಕಾಪಾಲಿಕ, ಪಾಶುಪತ, ಲಾಕುಲ, ಕಾಳಾಮುಖ ಮೊದಲಾದ ಮಧ್ಯಕಾಲೀನ ಶೈವ ತಾಂತ್ರಿಕ ಪಂಥಗಳು ಉಚ್ಛ್ರಾಯ ದಲ್ಲಿ ಇದ್ದಾಗ ಬಳ್ಪ ಒಂದು ಪ್ರಮುಖ ಶಾಕ್ತ ಕೇಂದ್ರ. ಬಳ್ಪ ದಂಡಿನಲ್ಲಿ ಉದ್ದ ಕಾಲಾಳುಗಳಿಗೆ ತರಬೇತಿ ನೀಡುವ ಕೇಂದ್ರ. ತ್ರಿಶೂಲಿನಿ ಸೈನಿಕರು ಆರಾಧನೆ ಮಾಡುವ ದೇವತೆ.  ಈ ದೇವಾಲಯದಿಂದ 15 km ದೂರದಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಒಂದು ಪ್ರಮುಖ ಕಾಳಾಮುಖಾದಿ ತಾಂತ್ರಿಕ ಕೇಂದ್ರವಾಗಿದ್ದು ಅಲ್ಲಿ ಸ್ಥಾನಿಕ ಬ್ರಾಹ್ಮಣರ ಮೂಲಕ ಆರಾಧನೆ ನಡೆಯುತ್ತಿತ್ತು. ಸ್ಥಾನಿಕರು ಮೂಲತಃ ಕಾಳಾಮುಖ ಪಂಥದವರು ಎಂಬ ಚರ್ಚೆ ಇದೆ. ಹಾಗಾಗಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಸ್ಮ ಕೊಡುತ...

ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ!

ಇಮೇಜ್
 ಬೆಂಗಳೂರಿನಲ್ಲಿ ಕುಷನರ ಕಾಲದ 1900 ವರ್ಷ ಹಳೆಯ ನಾಣ್ಯ! Third Kushan king Vima Kathphishas  standing facing, sacrificing at fire altar at left, club, tamgha and axehead-shafted trident in fields, ಕಳೆದ ವಾರ ನನಗೆ ತುಂಬಾ ಪ್ರಾಚೀನವಾದ ನಾಲ್ಕು ನಾಣ್ಯಗಳು ಸಿಕ್ಕವು. ಕೆಲವು ದಿನಗಳಿಂದ ವಿನೆಗರ್, ವಾಟೆ ಹುಳಿ ಹಾಕಿ ತೊಳೆದದ್ದೇ ತೊಳೆದದ್ದು. ಈಗ ಈ ನಾಣ್ಯಗಳು ಯಾವುದು ಎಂದು ತಿಳಿಯಲು ಸಾಧ್ಯವಾಗಿದೆ. ಇದು ಕುಷಾನರ ಮೂರನೇ ರಾಜ ವಿಮಾ ಕಡ್ ಫೀಸಸ್ ನ ನಾಣ್ಯ. ವಿಮಾ ಕಡ್ ಫೀಸಸ್ ನ ಚಿನ್ನದ ಮತ್ತು ತಾಮ್ರದ ನಾಣ್ಯಗಳು ಇವೆ. ಇವನ ನಾಣ್ಯಗಳು ಇವನನ್ನು ಶಿವಭಕ್ತ ಎಂದು ತೋರಿಸುತ್ತವೆ. ಸಧ್ಯ ನನ್ನ ಬಳಿ ಎರಡು ನಾಣ್ಯಗಳು ಇವೆ. ಇಲ್ಲಿ ನೀಡಿರುವ ನಾಣ್ಯದ ಒಂದು ಬದಿ ಕೋಟು ತೊಟ್ಟು ಕೈಯಲ್ಲಿ ಆಯುಧ ಹಿಡಿದ ವ್ಯಕ್ತಿ ಇದ್ದಾನೆ. ಹಿಂದೆ ನಂದಿಯ ಕುಂಡೆ ಇರುವುದರಿಂದ ಅದರ ಜೊತೆಗೆ ನಿಂತಿರುವ ವ್ಯಕ್ತಿಯ ತಲೆ ಕೂಡ ನೋಡಬಹುದು. ನಿಂತಿರುವ ವ್ಯಕ್ತಿ ವಿಮಾ ಕಡ್ ಫೀಸಸ್ ಮತ್ತು ನಂದಿಯ ಜೊತೆಗೆ ಇರುವವನು ಶಿವ! ಇದು ಸುಮಾರು 1900 ವರ್ಷಗಳ ಹಳೆಯ ನಾಣ್ಯ! ಆದರೆ ಅಕ್ಷರಗಳು ಅಸ್ಪಷ್ಟ. Siva standing facing, holding trident and deerskin, bull Nandi right behind,ption ಕುಜುಲ ಕಡ್ ‍ ಫೀಸಿಸ (ಸಾಮಾನ್ಯ ಶಕ. 30-80) ವಿಮಾ ಟಕ್ಟು (ಸಾಮಾನ್ಯ ಶಕ 80-95) ನಂತರ ಆಳಿದ ವಿಮ ಕಡ್ ‍ ಫೀಸಿಸನ (ಸಾಮಾನ್ಯ ಶಕ...

Arebase: A dialect rooted in harmony

ಇಮೇಜ್
Arebase: A dialect rooted in harmony Charan Aivarnad Purusha Daiva, Kannada Speaking deity worshipped in the form of Daivaradhana in Sullia region Karnataka teems with different versions of Kannada. There are more than 30 dialects of the language, which contribute to the linguistic richness of present-day Karnataka. Kavirajamarga, the earliest available work on rhetoric, grammar and poetics in Kannada, from the 9th century CE, speaks of the two major dialectic divisions of Kannada: Dakshina and Uttara. Sri Vijaya, the author of Kavirajamarga alludes to many varieties of Kannada, hinted at by the use of the phrase “Kannadangal”. Today, traditional linguists broadly classify Kannada into four geographical regions: Mysuru, Mangaluru, Dharwad and Kalaburagi Kannada. In these regions, various communities use a specific dialect as their mother tongue, whether it is Halakki Kannada, Havyaka Kannada, Kota Kannada, Rama Kshatriya Kannada, Badaga Kannada (spoken by the Badaga community in the Ni...