ಮರುದೈ ವೀರನ್ - ಪ್ರಭುತ್ವದ ಅನ್ಯಾಯಕ್ಕೆ ಬಲಿಯಾದ ತಮಿಳು ವೀರನ ಕಥೆ

ನಮ್ಮ ಮನೆಯ ಮುಂದಿನ ಗುಡ್ಡದ ಆಚೆ ತಮಿಳು ಮಾತನಾಡುವ ಸಮುದಾಯ ಒಂದಿದೆ. ಎಂಬತ್ತರ ದಶಕದಲ್ಲಿ ಈ ಭಾಗಕ್ಕೆ ಬಂದವರು. ಅವರು ಮಾರಿಯಮ್ಮನಿಗೆ ಗುಡಿ ಕಟ್ಟಿ ಆರಾಧಿಸುತ್ತಿದ್ದಾರೆ. ಅದು ಕೆಲವು ವರ್ಷಗಳ ವರೆಗೆ ಜೀರ್ಣಾವಸ್ತೆಯಲ್ಲಿಯೇ ಇತ್ತು. ಇತ್ತೀಚೆಗೆ ಹೊಸ ದೇಗುಲ ಸಂಕೀರ್ಣ ಕಟ್ಟಿ ಗಣಪತಿ ಮೊದಲಾದ ದೇವತೆಗಳನ್ನೂ ಪ್ರತಿಷ್ಠಾಪಿಸಿ ಪ್ರಾಣಿ ಬಲಿ ಕೇಳುವ ದೇವತೆಗಳಿಗೆ ಬ್ರಾಹ್ಮಣ ಅರ್ಚಕರಿಂದ ಪೂಜೆಯ ವ್ಯವಸ್ಥೆ ಮಾಡಿದ್ದಾರೆ.

ಇವರು ತಮ್ಮ ಕುಟುಂಬದ ರಕ್ಷಣೆಯ ದೈವ ಎಂದು ಗುಡ್ಡದ ತುದಿಯಲ್ಲಿ ಕಲ್ಲು ಹಾಕಿ ಒಂದು ದೇವತೆಗೆ ಆರಾಧನೆ ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಆಡು ತಲೆ ಕಡಿದು ಅದರ ಮಾಂಸದಿಂದ ಮಾಡಿದ ಅಡುಗೆಯ ಎಡೆ ಇಡುತ್ತಾರೆ.
ಯಾರು ಈ ಮರುದೈ ವೀರನ್?
ಅದು ಮರುದೈ ವೀರನ್ ಎಂಬ ದೇವತೆಯ ಕಲ್ಲು. ಆರಾಧನೆ ಮಾಡುವಾಗ ಮರುದೈ ವೀರನ್ ಪಾತ್ರಿಯ ಮೇಲೆ ಅವಾಹನೆಯಾಗಿ ಕತ್ತಿಯ ಮೇಲೆ ನಿಲ್ಲುವ, ಹುರಿ ಹಗ್ಗದಿಂದ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದುಕೊಳ್ಳುವ, ಚರ್ಮದ ವಾದ್ಯ ಭಾರಿಸುವ ಮತ್ತು ಎಲ್ಲಾ ಭಕ್ತರಿಗೂ ಭಸ್ಮದ ಉದ್ದದ ನಾಮ ಹಾಕುವ ಕ್ರಮ ನಡೆಯುತ್ತದೆ. ಇದನ್ನು ಮಾಡುವಾಗ ತುಳುವಿನ ದೈವಗಳು ಹಾಡುವ ಪಾಡ್ಡನದಂತಹ ಹಾಡು ನಿರರ್ಗಳವಾಗಿ ಲಯಬದ್ಧವಾಗಿ ಹಾಡುತ್ತಾರೆ.



ಮರುದೈ ವೀರನ್ ಒಬ್ಬ ಐತಿಹಾಸಿಕ ಪುರುಷ. ಇವನು ಮಧುರೆಯ ಒಬ್ಬ ವೀರ ಸೈನಿಕ. ಜಾನಪದರ ಬಾಯಲ್ಲಿ ಇವನು ಮರುದೈ ವೀರನ್ ಆಗಿದ್ದಾನೆ.
ಇವರನ್ನು ನಿಯಂತ್ರಿಸಲು ರಾಜ ತಿರುಮಲೈ ನಾಯಗರ್ ಮರ ಕಡಿಯುವ ಒಬ್ಬನ ಮಗನಾಗಿದ್ದ ಮರುದೈ ವೀರನನ್ನು ಕರೆಸಿಕೊಂಡು ಪಟ್ಟಣದ ಪಾರುಪತ್ಯ ನೀಡುತ್ತಾನೆ. ಇವನು ಡಕಾಯಿತರನ್ನು ನಿಯಂತ್ರಿಸಿ ಮಧುರೆ ಪಟ್ಟಣವನ್ನು ಭಯಮುಕ್ತಗೊಳಿಸಿದ. ಇಲ್ಲಿ ಇವನು ಬೊಮ್ಮಿ ಎಂಬವಳನ್ನು ಮದುವೆಯಾಗುತ್ತಾನೆ.
ವಿಜಯನಗರ ಸಾಮ್ರಾಜ್ಯದ ಆಡಳಿತ ಕುಸಿದ ಹಾಗೇ ದಕ್ಷಿಣ ಭಾರತದ ಅನೇಕ ರಾಜವಂಶಗಳು ಸ್ವತಂತ್ರ ಆಳ್ವಿಕೆ ನಡೆಸಲು ಆರಂಭಿಸಿದವು. ಅವುಗಳಲ್ಲಿ ಪಾಂಡ್ಯರ ಭಾಗವನ್ನು ನಾಯಕರ್ ಆಳುತ್ತಿದ್ದರು. ಈ ರಾಜವಂಶದ ತಿರುಮಲೈ ನಾಯಗರ್ (AD 1623-1659) ಮಧುರೆ ಪಟ್ಟಣವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸುತ್ತಿದ್ದಾಗ ನಡೆದ ಘಟನೆ ಇದು. ಅವನು ಬಿಜಾಪುರ ಸೇರಿದಂತೆ ಅನೇಕ ರಾಜರ ಮುಲಾಜಿಗೆ ಒಳಗಾಗದೆ ಆಳ್ವಿಕೆ ನಡೆಸುತ್ತಿದ್ದ. ಇವನ ಆಳ್ವಿಕೆಯಲ್ಲಿ ಮಧುರೆ ಪಟ್ಟಣ ಕಲ್ಲರ್ ಎಂಬ ಡಕಾಯಿತರ ಉಪಟಳಕ್ಕೆ ಒಳಗಾಗಿತ್ತು.
ಮಧುರೆ ಪಟ್ಟಣದಲ್ಲಿ ವಲ್ಲಿಯಮ್ಮಾಲ್ ಎಂಬ ರಾಜ ಆಸ್ಥಾನದ ನರ್ತಕಿಯ ಪರಿಚಯವಾಗುತ್ತದೆ. ಮರುದೈ ವೀರನ ರೂಪ, ಕಲೆ ಮತ್ತು ವೀರತ್ವಕ್ಕೆ ಮಾರು ಹೋಗಿ ಅವನ ಆಕರ್ಷಣೆಗೆ ಒಳಗಾಗುತ್ತಾಳೆ. ಅವನಲ್ಲಿ ನಾಟ್ಯ ಶಾಸ್ತ್ರ ಹೇಳಿ ಕೊಡುವಂತೆ ದುಂಬಾಲು ಬೀಳುತ್ತಾಳೆ.

ಮರುದೈ ವೀರನ್ ಬಗ್ಗೆ ಇರುವ ಒಂದು ಕಥನದ ಪ್ರಕಾರ ಇವನು ದಕ್ಷಿಣ ಭಾರತದ ರಾಜನೊಬ್ಬನ ಮಗ. ರಾಜ ಇವನ ಜನನದ ನಂತರ ತನ್ನ ಅದೃಷ್ಟ ಎಲ್ಲವೂ ನಶಿಸಿ ಹೋದವು ಎಂದು ಮಗುವನ್ನು ಬಿಟ್ಟು ಹೋದ. ಓರ್ವ ಮರ ಕಡಿಯುವ ವ್ಯಕ್ತಿಗೆ ಮರ ಕಡಿಯುವಾಗ ಸಿಕ್ಕಿದ ಮಗು ಮರುದೈ ವೀರನ್. ಈ ವ್ಯಕ್ತಿ ತನಗೆ ತಿಳಿದ ಎಲ್ಲಾ ಯೋಧ ಕಲೆಗಳನ್ನು ಇವನಿಗೆ ಕಲಿಸಿ ವೀರನನ್ನಾಗಿಸಿದ.

ಆದರೆ ರಾಜ ನಾಯಗರ್ ತಾನು ಆಕರ್ಷಿತನಾಗಿ ಪ್ರೀತಿಸುತ್ತಿದ್ದ ಹೆಣ್ಣಿನ ಜೊತೆಗೆ ಮರುದೈ ವೀರನ್ ಸಲುಗೆ ಬೆಳೆಸಿಕೊಂಡಿದ್ದನ್ನು ಕಂಡು ಕೋಪೋದ್ರಿಕ್ತನಾಗುತ್ತಾನೆ. ಅಲ್ಲದೇ ಮರುದೈ ವೀರನನ್ನು ದ್ವೇಷಿಸುತ್ತಿದ್ದ ಮಂದಿ ರಾಜನಲ್ಲಿ ವೀರನ್ ನಗರದಲ್ಲಿ ಉಪಟಳ ಮಾಡುತ್ತಿದ್ದವರ ಜೊತೆಗೆ ಕೈ ಜೋಡಿಸಿಕೊಂಡಿದ್ದಾನೆ ಎಂದು ಹೇಳಿ ಕಿವಿ ತುಂಬಿಸಿದರು. ಇದರಿಂದ ಮತ್ತಷ್ಟು ಕೋಪಗೊಂಡ ರಾಜ ಮರುದೈ ವೀರನ್ ಒಂದು ಕೈ ಮತ್ತು ಒಂದು ಕಾಲನ್ನು ಕತ್ತರಿಸುತ್ತಾನೆ.
ರಾಜನ ಕ್ರೂರ ನಿರ್ಧಾರಕ್ಕೆ ಬೊಮ್ಮಿ ಮತ್ತು ವಲ್ಲಿಯಮ್ಮಾಲ್ ಶಾಪ ಹಾಕುತ್ತಾರೆ. ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಾನು ಮಾಡಿದ ಪಾಪ ಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟು ನಾಯಗರ್ ಮರುದೈ ವೀರನ ದೇವಾಲಯವನ್ನು ಮಧುರೆಯ ಮೀನಾಕ್ಷಿಯಮ್ಮ ನ ದೇಗುಲದ ದಕ್ಷಿಣ ಭಾಗದ ದ್ವಾರದ ಬಳಿ ನಿರ್ಮಿಸುತ್ತಾನೆ.
ಹೀಗೆ ಮರುದೈ ವೀರನ ದೇವಾಲಯಗಳು ಇಂದು ತಮಿಳುನಾಡು, ಕೇರಳ, ಕರ್ನಾಟಕ ಕೆರೆಬಿಯನ್, ಮಲೇಷ್ಯಾ, ಸಿಂಗಪೂರ್, ದಕ್ಷಿಣ ಆಫ್ರಿಕಾ ಮೊದಲಾದೆಡೆ ಇವೆ. ಇವನನ್ನು ಕ್ಷೇತ್ರಪಾಲ ದೇವತೆಯಾಗಿ ನಂಬುತ್ತಾರೆ. ವೀರನ ಬಗ್ಗೆ ಬಗೆ ಬಗೆಯ ಹಾಡುಗಳನ್ನು ಕಟ್ಟಿ ಹಾಡುತ್ತಾರೆ.

ಮರುದೈ ವೀರನ್ ಬಗ್ಗೆ ಇರುವ ಒಂದು ಕಥನದ ಪ್ರಕಾರ ಇವನು ದಕ್ಷಿಣ ಭಾರತದ ರಾಜನೊಬ್ಬನ ಮಗ. ರಾಜ ಇವನ ಜನನದ ನಂತರ ತನ್ನ ಅದೃಷ್ಟ ಎಲ್ಲವೂ ನಶಿಸಿ ಹೋದವು ಎಂದು ಮಗುವನ್ನು ಬಿಟ್ಟು ಹೋದ. ಓರ್ವ ಮರ ಕಡಿಯುವ ವ್ಯಕ್ತಿಗೆ ಮರ ಕಡಿಯುವಾಗ ಸಿಕ್ಕಿದ ಮಗು ಮರುದೈ ವೀರನ್. ಈ ವ್ಯಕ್ತಿ ತನಗೆ ತಿಳಿದ ಎಲ್ಲಾ ಯೋಧ ಕಲೆಗಳನ್ನು ಇವನಿಗೆ ಕಲಿಸಿ ವೀರನನ್ನಾಗಿಸಿದ.

ಇನ್ನೊಂದು ಕಥನದ ಪ್ರಕಾರ ಇವನು ಕಾಶಿಯ ರಾಜ ತುಲಸಿಂಗಮ್ ಮತ್ತು ಕರ್ಪಗವಲ್ಲಿಯ ಮಗ. ಮಗು ಹುಟ್ಟುವಾಗ ಹೊಕ್ಕುಳ ಬಳ್ಳಿ ಕತ್ತಿಗೆ ಸುತ್ತಿ ಹಾಕಿಕೊಂಡು ಗಾಯ ಮಾಡಿಕೊಂಡಿತ್ತು. ಈ ಮಗುವಿನ ಬಗೆಗೆ ಜೋತಿಷ್ಯ ಕೇಳುವಾಗ ರಾಜ್ಯಕ್ಕೆ ಕೇಡು ಬರುತ್ತದೆ ಎಂದು ತಿಳಿದುಬರುತ್ತದೆ. ಹೀಗಾಗಿ ರಾಜ ಮಗುವನ್ನು ಬುಟ್ಟಿಯಲ್ಲಿ ಹಾಕಿ ನೀರಿನಲ್ಲಿ ಬಿಡುತ್ತಾನೆ.
ಈ ಮಗು ಚಿನ್ನಾನ್ ಮತ್ತು ಚಿನ್ನಿ ಎಂಬ ಮರ ಕಡಿಯುವ ವೃತ್ತಿಯ ಮಕ್ಕಳಿಲ್ಲದ ದಂಪತಿಗಳಿಗೆ ಸಿಗುತ್ತದೆ. ಅವರು ಮಗುವಿಗೆ ಮುತ್ತು ಕುಮಾರನ್ ಎಂಬ ಹೆಸರು ಇಟ್ಟು ಸಾಕುತ್ತಾರೆ. ಮುಂದೆ ಮಗುವಿನ ನಿಜವಾದ ಹೆತ್ತವರು ಬಂದು ಕೇಳಿಯಾರು ಎಂದು ಹೆದರಿ ದಂಪತಿಗಳು ಊರು ಬಿಟ್ಟು ದಕ್ಷಿಣಕ್ಕೆ ಬರುತ್ತಾರೆ. ಅಲ್ಲಿ ವಿಜಯನಗರಂ ರಾಜರ ಮಾಂಡಲಿಕನಾಗಿ ಆಳುತ್ತಿದ್ದ ರಾಜಕಂಬಲಂ ಸಮುದಾಯದ ರಾಜ ಬೊಮ್ಮು (ಬೊಮ್ಮುಳು ರಾಜ) ಚಿನ್ನಾನ್ ಅನ್ನು ದ್ವಾರಪಾಲಕನನ್ನಾಗಿ ನೇಮಿಸುತ್ತಾನೆ.

ಮುತ್ತು ಕುಮಾರನ್ ಅನ್ನು ಗುರುಕುಲಕ್ಕೆ ಕಳಿಸಲಾಗುತ್ತದೆ. ಅಲ್ಲಿ ಅವನು ಬೇರೆ ಬೇರೆ ವಿದ್ಯೆಗಳನ್ನು ಕಲಿಯುತ್ತಾನೆ. ಒಂದು ಬಾರಿ ಇವನನ್ನು ರಾಜ ಬೊಮ್ಮುವಿನ ಮಗಳು ಬೊಮ್ಮೀ ನೋಡುತ್ತಾಳೆ. ಕಟ್ಟಕಟ್ಟಳೆಯ ಪ್ರಕಾರ ಪ್ರಾಯಕ್ಕೆ ಬರುವ ತನಕ ಯಾವುದೇ ಪುರುಷರನ್ನು ನೋಡಬಾರದ ಈಕೆ ಮೊದಲು ನೋಡ ಬೇಕಾಗಿದ್ದು ತನ್ನನ್ನು ಮದುವೆ ಆಗುವವನನ್ನು. ಆದರೆ ಮುತ್ತು ಕುಮಾರನ್ ಅನ್ನು ನೋಡಿದ ಬೊಮ್ಮಿ ಅವನನ್ನು ಪ್ರೀತಿಸುತ್ತಾಳೆ. ಇದಕ್ಕೆ ರಾಜಕುಟುಂಬದ ವಿರೋಧ ವ್ಯಕ್ತವಾದಾಗ ಅವರಿಬ್ಬರೂ ಮಧುರೆಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ.
ಮಧುರೆಯಲ್ಲಿ ಕಟ್ಟುಮಸ್ತಾದ ಮುತ್ತು ಕುಮಾರನನ್ನು ನೋಡಿದ ರಾಜ ತಿರುಮಲೈ ನಾಯಗರ್ ಅವನನ್ನು ತನ್ನ ಸೈನ್ಯಕ್ಕೆ ಸೇರಿಕೊಳ್ಳುತ್ತಾನೆ. ಅವನಿಗೆ ವೀರನ್ ಎಂಬ ಬಿರುದನ್ನು ನೀಡುತ್ತಾನೆ.
ಮರುದೈ ವೀರನ್ ಬಗ್ಗೆ ಐತಿಹಾಸಿಕ ದಾಖಲೆಗಳು ಇಲ್ಲ. ಆದರೆ ಇವನ ಬಗ್ಗೆ ತಮಿಳಕಂನಲ್ಲಿ ಅನೇಕ ಜಾನಪದ ಹಾಡುಗಬ್ಬಗಳು ಇವೆ. ಅರುಂತತಿಯರ್ ಎಂಬ ದಲಿತ ಸಮುದಾಯಕ್ಕೆ ಸೇರಿದ ಮರುದೈ ವೀರನ್ ತನ್ನದಲ್ಲದ ತಪ್ಪಿಗೆ ಮರಣ ಹೊಂದಿದ.



1939 ರಲ್ಲಿ ಮರುದೈ ವೀರನ್ ಬಗ್ಗೆ ಟಿ ಪಿ ರಾಜಲಕ್ಷ್ಮಿ ನಿರ್ದೇಶನ ಮತ್ತು ಅಭಿನಯದ ಮತ್ತು ವಿ ಎ ಚಲ್ಲಪ್ಪ, ಚಿದಂಬರನಾಥನ್ ಮೊದಲಾದವರು ಅಭಿನಯಿಸಿದ ಸಿನೇಮಾ ಬಂತು. 1956 ರಲ್ಲಿ ದಾಸರಿ ಯೋಗಾನಂದ ನಿರ್ದೇಶನದ ಮತ್ತು ಎಂಜಿಆರ್, ಭಾನುಮತಿ ರಾಮಕೃಷ್ಣ, ಪದ್ಮಿನಿ ಅಭಿನಯದ ಇನ್ನೊಂದು ಚಲನಚಿತ್ರ ಬಂದಿತ್ತು. 2018 ರಲ್ಲಿ ಇನ್ನೊಂದು ಫಿಲ್ಮ್ ಪಿ ಜಿ ಮುತ್ತಯ್ಯ ನಿರ್ದೇಶನದಲ್ಲಿ ಗಜರಾಜ್, ಮಿಮೆ ಗೋಪಿ ಮೊದಲಾದವರ ಅಭಿನಯದ ಚಿತ್ರ ತೆರೆಕಂಡಿತು.
ಮರುದೈ ವೀರನ್ ಜಾತಿ ಅಸಮಾನತೆ ಮತ್ತು ಮರ್ಯಾದೆಗೇಡು ಕಾರಣಕ್ಕಾಗಿ ಬಲಿಯಾದ ಐತಿಹಾಸಿಕ ನಾಯಕ!

ಮಂಜುನಾಥ್ ಮಾರನ್ ಹೇಳುತ್ತಾರೆ:
ಇನ್ನೂ ಹೇಳಬೇಕೆಂದ್ರೆ ಈ ಮಧುರೈ ವೀರನ್ ಹಾಗೂ ಒಂಡಿ ವೀರನ್ ಎನ್ನುವ ಎರಡು ಜನಪದ ದೇವರುಗಳು ತಮಿಳುನಾಡಿನ ತೆಲುಗು ಭಾಷಿಕ ಪರಿಶಿಷ್ಟ ಜಾತಿ ಸಮುದಾಯವಾದ ಅರುಂಧತಿಯರು (ಸಕ್ಕಲಿಯರ್) ಎಂಬ ಸಮುದಾಯದ ಕುಲ ದೇವರುಗಳು !!
ಆದ್ರೆ ಈಗ ಈ ಎರಡು ದೇವರುಗಳು ಆ ಒಂದು ಸಮುದಾಯಕ್ಕೆ ಸೀಮಿತವಲ್ಲದೆ ಎಲ್ಲರೂ ಪೂಜಿಸುವಂತಹ ದೇವರುಗಳಾಗಿ ಮಾರ್ಪಾಟಾಗಿವೆ !!!
ಮಧುರೈ ಯನ್ನು ಆಳಿದ ತೆಲುಗು ನಾಯ್ಕರ ಆಳ್ವಿಕೆಯಲ್ಲಿ ಕಮಾಂಡರ್ ಚೀಫ್ ಆಗಿದ್ದ ಸಕ್ಕಲಿಯರ್ ಸಮುದಾಯದ ಕಾವಲುಗಾರನೇ ಈ ಮಧುರೈ ವೀರನ್ !!!


ಚರಣ್ ಐವರ್ನಾಡು

ಕಾಮೆಂಟ್‌ಗಳು

Bahurupi Bharatha