ರಾಜಕಾರಣದ ರಾಮನ ನೆಪದಲ್ಲಿ..
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ‘ರಾಮ ಜಪ’ ತಾರಕಕ್ಕೇರಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಡುವುದು ಬಿಜೆಪಿಯ ಪ್ರಚಾರದ ಮುಖ್ಯ ವಿಚಾರವಾಗಿತ್ತು. ಗೆದ್ದ ನಂತರ ರಾಮನ ನೆನಪಾಗದಿದ್ದವರಿಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲಿ ರಾಮಮಂದಿರದ ನಿರ್ಮಾಣದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ನಡೆದ ‘ಸಂತ ಸಮ್ಮೇಳನ’ದಲ್ಲಿ ಮಂದಿರ ನಿರ್ಮಾಣದ ಸಂದೇಹ ಬೇಡ ಎಂದಿದ್ದಾರೆ.
ಅದೇ ಸಭೆಯಲ್ಲಿದ್ದ ‘ರಾಮ ಜನ್ಮಭೂಮಿ ನ್ಯಾಸ್ ಸಂಘಟ£'’Éಯ ಸದಸ್ಯ ರಾಮ್ ವಿಲಾಸ್ ವೇದಾಂತಿ ರಾಮ ಮಂದಿರದ ನಿರ್ಮಾಣಕ್ಕೆ ಕೋರ್ಟಿನ ಅನುಮತಿಗಾಗಿ ಕಾಯಬೇಕಿಲ್ಲ ಎಂದಿದ್ದಾರೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯಿರುವ ಸ್ಥಳದ ಕುರಿತು ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಜಾಗವನ್ನು ನಿರ್ಮೋಹಿ ಅಖಾರ ಪಂಥ, ಸುನ್ನಿ ವಕ್ಫ್ ಬೋರ್ಡ್ ಮತ್ತು ರಾಮಂದಿರಕ್ಕೆ ಭಾಗಗಳನ್ನಾಗಿ ಹಂಚಿ ಆದೇಶ ಹೊರಡಿಸಿತ್ತು. ಈ ತೀರ್ಪನ್ನು ವಿರೋಧಿಸಿ ಸುಪ್ರಿಂ ಕೋರ್ಟಿನ ಮೆಟ್ಟಿಲು ಏರಿದ್ದರು.
ಭಾರತ ಸಾಂಸ್ಕøತಿಕ ವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಮುದಾಯ ಮತ್ತು ಭಾಷೆಗಳ ಮಧ್ಯೆ ಹರಿಯಬೇಕಾದ ರಾಮ ವಿಗ್ರಹಗೊಳ್ಳುತ್ತಿದ್ದಾನೆ. ಭಾರತ ಬಹುಸಮುದಾಯಗಳು ರಾಮನನ್ನು ವಿವಿಧ ಆಯಾಮಗಳಿಂದ ನೋಡಿವೆ. ರಾಮ ಬಹುಮುಖಿಯಾಗಿ ಬೆಳೆದ ಕಾರಣಕ್ಕೆ ರಾಮಾಯಣ ಭಾರತದಲ್ಲಿ ಜೀವಂತವಾಗಿದೆ. ರಾಮ ಇಟ್ಟಿಗೆಯ ಮೇಲೊ, ಆದಿತ್ಯನಾಥರು ನಿರ್ಮಿಸಲಿರುವ ವಿಗ್ರಹವಾಗಿಯೊ ಸ್ಥಿರೀಕರಿಸಲ್ಪಟ್ಟರೆ ಭಾರತ ಸಾವಿರಾರು ವರ್ಷಗಳಿಂದ ನಿರೂಪಿಸಿದ ‘ರಾಮ’ರು ಹಿನ್ನಲೆಗೆ ಸರಿಯುತ್ತಾರೆ ಮತ್ತು ಕಣ್ಮರೆಯಾಗುತ್ತಾರೆ.
ಭಾರತದಲ್ಲಿ ಎಷ್ಟು ರಾಮಯಣಗಳಿವೆ? ವಾಲ್ಮಿಕಿ ಬರೆದ ರಾಮಾಯಣ ಮೂಲ ರಾಮಾಯಣವೇ? ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧವನ್ನು ವಿರೋಧಿಸಿ ನಡೆದ ಪ್ರತಿಭಟನೆ ಐತಿಹಾಸಿಕ ವಿವಾದವಾಗಿದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, ಬಿಜೆಪಿ, ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿದವು. ಈ ಪ್ರಬಂಧ ಇಡೀ ಭಾರತ ಹೇಗೆ ರಾಮಾಯಣವನ್ನು ನಿರ್ವಚಿಸಿಕೊಂಡಿದೆ ಎಂಬುದನ್ನು ತೋರಿಸಿತ್ತು. ಅದರಲ್ಲಿ ತಮಿಳಿನ ಕಂಬನ್ ರಾಮಯಣ, ಕನ್ನಡದ ತಂಬೂರಿಯವರು ಹಾಡುವ ತಂಬೂರಿ ರಾಮಾಯಣ ಮೊದಲಾದ ರಾಮಯಣಗಳ ವಿವರಗಳಿದ್ದವು. ಇದೊಂದು ಅದ್ಭುತವಾದ ಬರಹವಾಗಿದೆ ಮತ್ತು ರಾಮನನ್ನು ಟೀಕಿಸುವ ಯಾವುದೇ ವಾಕ್ಯಗಳಿಲ್ಲ.
ಭಾರತದಲ್ಲಿ ಸಾವಿರಾರು ರಾಮಾಯಣಗಳಿವೆ. ಒಂದಕ್ಕಿಂತ ಒಂದು ಭಿನ್ನ. ‘ಚಿತ್ರಪಟ ರಾಮಯಣ’ದಲ್ಲಿ ಲವ-ಕುಶರ ಹುಟ್ಟು ಮೂಲ ರಾಮಯಣ ಎಂದು ನಾವು ಭಾವಿಸಿರುವ ವಾಲ್ಮೀಕಿ ರಾಮಾಯಣಕ್ಕಿಂತ ಬೇರೆಯದೇ ಕತೆ. ಕರಾವಳಿಯವರಿಗೆ ರಾಮ ಕಂಡದ್ದು ಯಕ್ಷಗಾನ ರಂಗದಲ್ಲಿ. ಅನೇಕ ಬಾರಿ ರಾಮನನ್ನು ಮೀರಿಸುವಂತೆ ರಾವಣನ ಪಾತ್ರವು ವಿಜ್ರಂಭಿಸುವಾಗ ಅದು ರಾಮನಿಗೆ ಬಂದ ಕುಂದು ಅಲ್ಲ! ಯಕ್ಷಗಾನದ ಆದಿಕವಿ ಪಾರ್ತಿಸುಬ್ಬನ ‘ಪಂಚವಟಿ’ಯ ಕಥೆಯೂ ಭಿನ್ನವಾದದ್ದು. 2008ರಲ್ಲಿ ರಾಮನಿಗೆ ಅವಮಾನ ಮಾಡಲಾಗಿದೆ ಎಂದು ನಡೆಸಲಾದ ಪ್ರತಿಭಟನೆ ಜನರು ತಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿರುವ ರಾಮನಿಗೆ ಮಾಡಿದ ಅವಮಾನವಲ್ಲದೆ ಮತ್ತೇನೂ ಅಲ್ಲ!
ಬಹು ಸಾಂಸ್ಕøತಿಕ ದೇಶವಾದ ಭಾರತದಲ್ಲಿ ರಾಮನನ್ನು ಆರಾಧಿಸುವಂತೆ ರಾವಣನನ್ನೂ ಪರಂಪರಾನುಗತವಾಗಿ ಆರಾಧಿಸುವ ಜನಾಂಗಗಳಿವೆ. ಆ ಸಮುದಾಯಗಳ ಸಂಸ್ಕøತಿಯೂ ಭಾರತದ ಸಂಸ್ಕøತಿ. ‘ರಾವಣ’ ಎಂದು ಸಿನೇಮವೊಂದಕ್ಕೆ ಹೆಸರಡುವಾಗ ಅಸಹನೆ ವ್ಯಕ್ತಪಡಿಸುವವರು ಇದನ್ನು ಗಮನಿಸಬೇಕು. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಗಡಿ ಭಾಗದಲ್ಲಿರುವ ಮಂಡ್ಸೂರ್‍ನಲ್ಲಿ ರಾವಣನನ್ನು ತಮ್ಮೂರಿನ ಅಳಿಯ ಎಂದು ಕರೆದು ಆರಾಧಿಸುತ್ತಾರೆ. ಉತ್ತರ ಪ್ರದೇಶದ ಬಿಸ್ರಾಖ್‍ನ್ನು ರಾವಣನ ಹುಟ್ಟೂರು ಎಂದು ಕರೆದು ಅವನನ್ನು ಆರಾಧಿಸುತ್ತಾರೆ. ಕೋಲಾರ ಜಿಲ್ಲೆಯಲ್ಲಿ ರಾವಣನ ಆರಾಧನೆಯಿದೆಯಲ್ಲದೇ ಶಿವನ ಮೆರವಣಿಗೆಯಲ್ಲಿ ಹತ್ತು ತಲೆಗಳ, ಇಪ್ಪತ್ತು ಕೈಗಳ ರಾವಣ ಪ್ರತಿಮೆಯನ್ನೂ ಪೂಜಿಸುತ್ತಾರೆ. ಮಂಡ್ಯದ ಮಳವಳ್ಳಿ ತಾಲುಕಿನಲ್ಲಿ ರಾವಣನ ದೇವಾಲಯವಿದೆಯೆಂದು ಕೇಳಿದ್ದೇನೆ.
ಇಂದಿನ ಹೊಸ ಸಾಂಸ್ಕøತಿಕ ರಾಷ್ಟ್ರೀಯತೆಯನ್ನು ಪ್ರತಿಪಾಧಿಸುತ್ತಿರುವ ಭಾರತದಲ್ಲಿ ರಾವಣನ ಆರಾಧಕರು ದೇಶದ್ರೋಹಿಗಳಾಗುತ್ತಾರೆ. ದೇಶದ ಬಹುತ್ವವನ್ನು ನಂಬುವ ಸಾಂವಿಧಾನಿಕ ರಾಷ್ಟ್ರೀಯತೆಯ ಪ್ರತಿಪಾಧಕರು ರಾವಣನ ಆರಾಧನೆಯನ್ನೂ ಈ ದೇಶದ ಸಂಸ್ಕøತಿಯೆಂದೆ ಬಗೆಯುತ್ತಾರೆ. ನಮ್ಮ ಮುಂದಿರುವ ದೊಡ್ಡ ಸವಾಲು ಬಹುಧರ್ಮಗಳಿರುವ ಭಾರತೀಯ ಸಮಾಜದಲ್ಲಿ ಈ ಧಾರ್ಮಿಕ ಭಿನ್ನತೆಯನ್ನು ಹೇಗೆ ನಿರ್ವಹಿಸಬೆಕೆಂಬುದು!
ನನಗೆ ‘ಹಿಂದುತ್ವ’ದ ಹೆಸರಿನಲ್ಲಿ ಪ್ರತಿಪಾದಿತವಾಗುತ್ತಿರುವ ಸಾಂಸ್ಕøತಿಕ ರಾಷ್ಟ್ರೀಯತೆಯ ಬಗ್ಗೆ ಅನುಮಾನವಿದೆ. ಅದು ಭಾರತದ ಬಹುಸಾಂಸ್ಕøತಿಕ ನೆಲೆಗಳಿಗೆ ದೊಡ್ಡ ಪೆಟ್ಟನ್ನು ನೀಡುತ್ತದೆ. ಇದಕ್ಕೆ ಇಂದು ನಮ್ಮ ಕಣ್ಣ ಮುಂದೆ ನಿದರ್ಶನಗಳಿವೆ. ಎ ಕೆ ರಾಮನುಜನ್‍ರ ಬರಹಕ್ಕೆ ಬಂದ ವಿರೋಧ ಇದರ ಫಲವೇ ! ಈ syndicated ಹಿಂದುತ್ವಕ್ಕೆ ರಾಮಾಯಣದ ಬಹುಪಠ್ಯಗಳು ಬೇಕಿಲ್ಲ, ಅವುಗಳನ್ನು ಉಳಿಸುವ ಬದ್ದತೆಯೂ ಇಲ್ಲ. ಇವರಿಗೆ ರಾಮ ಪ್ರತಿಮೆಯಾಗಿ ಗಗನ ಮುಟ್ಟಬೇಕೇ ಹೊರತು ಮೌಲ್ಯವಾಗಿ ರಾಮ ಬೆಳೆಯಬೇಕೆಂಬ ನಿಲುವು ಇಲ್ಲ. ರಾಮ ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಭಾಷೆಗಳಲ್ಲಿ ಬೆಳೆದದ್ದು ಮೌಲ್ಯವಾಗಿಯೇ ಹೊರತು ಪ್ರತಿಮೆಯಗಿ ಅಲ್ಲ. ಈ ಕಾರಣಕ್ಕೆ ಲೋಹಿಯಾ ರಾಮ, ಕೃಷ್ಣ ಮತ್ತು ಶಿವನನ್ನು ಭಾರತವನ್ನು ನಿರೂಪಿಸುವ ನಾಯಕರು ಎಂದದ್ದು.
ರಾಮ ಅಯೋದ್ಯೆಯಲ್ಲಿ ಹುಟ್ಟಿದ ಎಂಬಲ್ಲಿಗೆ (ಅಲ್ಲಿನ ಅನೇಕ ದೇವಾಲಯಗಳು ರಾಮ ತಮ್ಮ ದೇವಾಲಯದಲ್ಲೇ ಹುಟ್ಟಿದ್ದು ಎನ್ನುತ್ತವೆ!) ರಾಮ ಅಯೋದ್ಯೆಗಷ್ಟೇ ಸೀಮಿತವಾದ. ಆದರೆ ರಾಮನನ್ನು ತಮ್ಮೊಳಗೆ ತುಂಬಿಕೊಂಡ ಜಾನಪದರಿಗೆ ರಾಮ ಅವರವರ ಊರಲ್ಲೇ ಹುಟ್ಟಿದ್ದು! ಇಲ್ಲಿ ರಾಮ ಸ್ಥಳೀಯಗೊಳ್ಳುವ ಪ್ರಕ್ರಿಯೆ ಭಾರತದ ಸಂಸ್ಕøತಿಯ ಮಹತ್ವಪೂರ್ಣವಾದ ಲಕ್ಷಣ.
ಸಧ್ಯ ಭಾರತದಲ್ಲಿ ದೇವರು ರಾಜಕೀಯದ ವಿಷಯವಾಗಿದ್ದಾನೆ. ರಾಮ ಬಿಜೆಪಿಗೆ ಮತಗಳನ್ನು ತಂದುಕೊಡುತ್ತಾನೆ. ರಾಮಮಂದಿರದ ಕನಸಿನಲ್ಲಿರುವವರು ಮಂದಿರಕ್ಕಾಗಿ ಬಾಯಿ ಬಿಟ್ಟು ಕಾಯುತ್ತಿದ್ದಾರೆ. ಅದೇ ಭಾರತ ಸಾಂಸ್ಕøತಿಕವಾಗಿ ಅವಸಾನಗೊಳ್ಳುತ್ತಿದೆ. ಜಾನಪದ ರಾಮಾಯಣ ಕಾವ್ಯಗಳು ಕಣ್ಮರೆಯಾಗುತ್ತಿವೆ. ಮೌಲ್ಯವಾಗಬೇಕಾದ ಈ ದೇಶದ ಸಾಂಸ್ಕøತಿಕ ನಾಯಕನನ್ನು ಪ್ರತಿಮೆಯಾಗಿಸಿ ಒಂದೆಡೆ ಚಲಿಸದಂತೆ ನಿಲ್ಲಿಸಲಾಗುತ್ತದೆ. ಈ ಪ್ರತಿಮೆಗಳು ದೇಶದ ಆಳುವವರನ್ನು ನಿರ್ಧರಿಸುತ್ತವೆಯೆಂದರೆ ಅದೊಂದು ಪ್ರಜಾಪ್ರಭುತ್ವದ ದೊಡ್ಡ ವಿಡಂಬಣೆಯಾಗಿ ಕಾಣುತ್ತದೆ.
ರಾಮ ಜನ್ಮಭೂಮಿಯ ಘೋಷಣೆಯೊಂದಿಗೆ ಬಾಬ್ರಿ ಮಸೀದಿ ಧ್ವಂಸ ಮಾಡಿ ಆರಂಭವಾದ ಕೋಮು ಸಂಘರ್ಷಕ್ಕೆ ಸಾವಿರಾರು ಜೀವಗಳು ಬಲಿಯಾದವು. ಅಂದು ಹತ್ತಿದ ಕೋಮು ಲಡಾಯಿಯ ಕಿಡಿ ಇಂದು ದೇಶವನ್ನು ಸುಡುತ್ತಿದೆ. ರಾಮ ಕಟ್ಟಿದ್ದು ಸೇತುವೆಯನ್ನು. ಅದು ಎರಡು ಹೃದಯಗಳ ನಡುವೆ ನಿರ್ಮಾಣವಾಗಬೇಕಾದ ಸೇತುವೆ. ರಾಮ ಕಟ್ಟುವುದನ್ನು ಕಲಿಸಿದ, ಒಡೆಯುವುದನ್ನಲ್ಲ!
ಇತಿಹಾಸದ ಆಧಾರದಲ್ಲಿ ನಾವು ಆರಾಧನಾ ಕೇಂದ್ರಗಳ ಮರುಸ್ಥಾಪನೆಗೆ ತೊಡಗಿದರೆ ನಮ್ಮ ಮುಂದೆ ಅನೇಕ ಸವಾಲುಗಳು ಎದುರಾಗುತ್ತವೆ. ಈ ದೇಶದಲ್ಲಿನ ಅನೇಕ ಬೌದ್ಧ ನೆಲೆಗಳು ಆಚಾರ್ಯ ಶಂಕರರ ಕಾಲದಲ್ಲಿ ಶೈವ ದೇವಾಲಯಗಳಾಗಿವೆ. ಬೌದ್ಧ ದೇವತೆ ತಾರಾ ಭಗವತಿಯ ಕ್ಷೇತ್ರಗಳು ಶಾಕ್ತ ನೆಲೆಗಳಾಗಿವೆ. ಅನೇಕ ಜೈನ ಬಸದಿಗಳು ಶೈವ ದೇವಾಲಯಗಳಾಗಿವೆ. ಶೈವ ದೇವಾಲಯಗಳು, ಜೈನ ಬಸದಿಗಳು ರಮಾನುಜಾಚಾರ್ಯರ ಕಾಲದಲ್ಲಿ ಶ್ರೀವೈಷ್ಣವ ದೇವಾಲಯಗಳಾಗಿ ಸ್ಥಿತ್ಯಂತರಗೊಂಡಿವೆ. ಅನೇಕ ದೇವಾಲಯಗಳು ಮಸೀದಿಗಳಾಗಿವೆ. ಕರಾವಳಿಯ ದೈವಾರಾಧನೆಯ ನೆಲೆಗಳು ವೈದಿಕ ದೇವಾಲಯಗಳಾಗಿವೆ. ಮಂಗಳೂರಿನ ‘ಕದ್ರಿ ಮಂಜುನಾಥ’ (ಮೂಲ ಮಂಜುನಾಥ ದೇವಾಲಯ) ಮೂಲತಃ ಬೌದ್ಧರ ‘ಮಂಜುಶ್ರೀ ಬೋಧಿಸತ್ವ’! ಕದಳಿ ವಿಹಾರ ಒಂದು ಬೌದ್ಧ ತಾಂತ್ರಿಕ ಪಂಥವಾದ ವಜ್ರಾಯನದ ವಿಹಾರ ಮತ್ತು ಬೌದ್ಧ ಮೂಲದಿಂದಲೇ ಬಂದ ಶೈವ ಮತ ನಾಥ ಪಂಥದ ನೆಲೆ. ಅದಕ್ಕೆ ಅಲ್ಲಿಯ ಅವಲೋಕಿತ, ಬುದ್ಧ, ತಾರೆ, ಮಂಜುಶ್ರೀಯ ವಿಗ್ರಹಗಳೇ ಸಾಕ್ಷಿ. ಅಲ್ಲಿಯ ನಾಥ ಪರಂಪರೆಯ ಪ್ರಭಾವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ನಮ್ಮ ಮುಂದೆ ಇಂತಹ ಸಾವಿರಾರು ಐತಿಹಾಸಿಕ ಸಂಗತಿಗಳಿವೆ. ಇವೆಲ್ಲವನ್ನೂ ಮೂಲವೆಂದು ಬಗೆದು ಮರುಪರಿವರ್ತಿಸಲು ತೊಡಗಿದರೆ ಈ ದೇಶದಲ್ಲಿ ರಕ್ತಪಾತವಾದೀತು. ಪ್ರಜ್ಞಾವಂತರು ಇತಿಹಾಸವನ್ನು ವರ್ತಮಾನಕ್ಕೆ ತಂದು ನೋಡುವುದಿಲ್ಲ.
ಈ ದೇಶದಲ್ಲಿ ರಾಮ ನದಿಯಾಗಿ ಹರಿಯುತ್ತಿದ್ದಾನೆ. ಸಾವಿರಾರು ತೊರೆಗಳಾಗಿ ಬೇರೆ ಬೇರೆ ಭಾಷೆಗಳಲ್ಲಿ ರಾಮಾಯಣ ಪ್ರವಹಿಸಿದೆ. ಹಾಗಾಗಿ ರಾಮಾಯಣ ಪರಂಪರೆ ಜೀವಂತವಾಗಿದೆ. ಇಂದು ಈ ಪರಂಪರೆಗೆ ಹೊಡೆತಗಳು ಬೀಳುತ್ತವೆ. ಅದು ಹೊಸ ಮತೀಯ ಸಿದ್ಧಾಂತಗಳಿಂದ. ಇವು ಏಕರೂಪದ ಸಂಸ್ಕøತಿಯನ್ನು ಬಲವಂತವಾಗಿ ಹೇರುತ್ತಿವೆ. ಹರಿವ ರಾಮನಿಗೆ ಕಟ್ಟೆ ಕಟ್ಟುತ್ತವೆ. ನಾವು ಈ ದೇಶದ ಬಹುರೂಪಿ ಸಂಸ್ಕøತಿಯನ್ನು ಈ ಏಕರೂಪದ ಮತೀಯತೆಗೆ ಎದುರಾಗಿ ಕಟ್ಟುವುದು ಅಗತ್ಯವಾಗಿದೆ.
************************************
Charan Aivarnad
Paleppady
9740249793



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You