ರಾಜಕಾರಣಿಗಳ ಭಾಷೆಕಲುಷಿತಗೊಂಡಿದೆ!
ಕಾಂಗ್ರೇಸಿನ ಹಿರಿಯ ನಾಯಕ ಮತ್ತು ನಟರಾಜ್ ಬಬ್ಬರ್ ಮಧ್ಯಪ್ರದೇಶದ ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರತಾಯಿ ಹೀರಾಬೆನ್ರ ವಯಸ್ಸನ್ನು ಮೌಲ್ಯ ಕುಸಿದ ರುಪಾಯಿಗೆ ಹೋಲಿಸಿ ವಿವಾದವನ್ನು ಸೃಷ್ಟಿಸಿದ್ದಾರೆ, ಪ್ರಧಾನಿಗಳು ತಮ್ಮತಾಯಿಗೆರಾಜಕೀಯದಗಂಧ ಗಾಳಿ ಗೊತ್ತಿಲ್ಲವೆಂದೂ, ಅವರನ್ನುರಾಜಕೀಯದಲ್ಲಿಎಳೆದು ತರಬೇಡಿ ಎಂದು ಟೀಕಿಸಿದ್ದಾರೆ. ರಾಜ್ ಬಬ್ಬರ್ ಹೇಳಿಕೆ ಸಮರ್ಥನೀಯವಾದುದಲ್ಲ. ಮನುಷ್ಯನ ವಯಸ್ಸು ಮತ್ತುದೈಹಿಕ ಸ್ಥಿತಿಯನ್ನು ಟೀಕಿಸುವುದು ಸಭ್ಯ ಸಂಸ್ಕøತಿಯಲ್ಲ. ಇದು ಹಿರಿಯ ಮಹಿಳೆಯೋರ್ವರಿಗೆ ತೋರಿದ ಅಗೌರವ.
2013 ಜುಲೈನಲ್ಲಿ ನರೇಂದ್ರ ಮೋದಿಯವರುಯುಪಿಎ ಸರಕಾರದ ಸಂದರ್ಭದಲ್ಲಿ ಡಾಲರ್ ಎದುರು ರುಪಾಯಿ ಬೆಲೆ 60.5 ಆದಾಗ ಇದೇ ಟೀಕೆಯನ್ನು ಮಾಡಿದ್ದರು. ಎಂಬತ್ತು ವರ್ಷ ಪ್ರಾಯದ ಮನಮೋಹನ್ ಸಿಂಗ್ರ ವಯಸ್ಸಿಗೆ ರುಪಾಯಿ ಬೆಲೆ ಏರುತ್ತದೆ ಎಂದು ಮೋದಿಯವರು ಟೀಕಿಸಿದ್ದರು. ಇದನ್ನೇ ತಿರುಗು ಬಾಣವಾಗಿರಾಜ್ ಬಬ್ಬರ್ ಎಸೆದು ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯ ನಾಯಕ ಮಾತುಗಳು, ಭಾಷಣಗಳು ನೈತಿಕತೆ ಮತ್ತು ಪ್ರೌಢಿಮೆಯನ್ನು ಕಳೆದುಕೊಂಡು ವೈಯಕ್ತಿಕವಾಗಿ ಜರೆಯುವ ವರೆಗೆ ಬೆಳೆದಿದೆ. ವಿವೇಚನೆ ಮಾಡದೆ ಸುಳ್ಳು, ತಿರುಚಿದ, ಪ್ರಚೋದಕ ಮತ್ತು ಕೀಳು ಮಟ್ಟದ ಹೇಳಿಕೆಗಳನ್ನು ನೀಡಲು ಹಿಂಜರಿಯುತ್ತಿಲ್ಲ. ಚುನಾವಣಾ ಪ್ರಚಾರಗಳು ತಮ್ಮ ಸಾಧನೆಗಳನ್ನು ಹೇಳಿ ಎದುರು ಪಕ್ಷವನ್ನುರಚನಾತ್ಮಕವಾಗಿಟೀಕಿಸುವ ಬದಲು ಹೊಲಸು ಟೀಕೆಗಳನ್ನು ಮಾಡುತ್ತಿದ್ದಾರೆ. ಅದನ್ನು ಆ ನಾಯಕರ ಅನುಯಾಯಿಗಳು ಸಂಭ್ರಮಿಸುತ್ತಾರೆ.
ಇತ್ತೀಚಿನ ದಿಗಳಲ್ಲಿ ನಮ್ಮ ನಾಯಕರುಗಳು ಪರಸ್ಪರ ಎದುರಾಳಿಗಳನ್ನು ಹಿಟ್ಲರ್ ಮೊದಲಾದವರಿಗೆ ಹೋಲಿಸಿಕೊಳ್ಳುತ್ತಿದ್ದಾರೆ. ಮೋದಿಯವರು ಇಂದಿರಾಗಾಂಧಿಯವರನ್ನು ಹಿಟ್ಲರ್ ಎಂದು ಕರೆದು ತಮ್ಮ ಪ್ರಧಾನಿ ಸ್ಥಾನಮಾನಕ್ಕೆ ಧಕ್ಕೆ ತಂದಿದ್ದಾರೆ.. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋದಿಯವರನ್ನು ಹಿಟ್ಲರ್ ಎಂದೂ, ಅಮಿತ್ ಶಾರನ್ನು ಹಿಟ್ಲರ್ನ ಸಂಪುಟದಲ್ಲಿದ್ದ ಜೋಸೆಫ್ಗೂಬೆಲ್ಸ್ ಎಂದುಕರೆದಿದ್ದರು. ಇದು ತಮ್ಮ ಎದುರಾಳಿ ನಾಯಕರನ್ನು ಸಮಾಜದ ಮುಂದೆ ಅತ್ಯಂತ ಕ್ರೂರ ಎಂದು ಬಿಂಬಿಸುವ ತಂತ್ರ. ಇದು ಸೌಹಾರ್ದಪೂರ್ಣವಾದ ಸಮಾಜದ ಸ್ವಾಸ್ಥ್ಯವನ್ನು ನಿಸ್ಸಂಶಯವಾಗಿ ಹಾಳುಮಾಡಿತ್ತದೆ.
ನಮ್ಮ ಪ್ರಧಾನಿಗಳು ಭಾಷಣ ಮಾಡುವುದರಲ್ಲಿಎತ್ತಿದ ಕೈ. ಕೆಲವೊಮ್ಮೆ ಮಾತನಾಡಬೇಕಾದಲ್ಲಿ ಮೌನ ವಹಿಸಿದರೆ, ಕೆಲವೆಡೆಅತಿಯಾಗಿ ಮಾತನಾಡುತ್ತಾರೆ. ಇತಿಹಾಸದಲ್ಲಿ ಗತಿಸಿಹೋದ ಮಹಾನ್ ನಾಯಕರೆಲ್ಲಾ ಒಳ್ಳೆಯ ಮಾತುಗಾರರಾಗಿದ್ದರು. ಹಿಟ್ಲರ್ ಸೇರಿದಂತೆ ಅನೇಕ ಸರ್ವಾಧಿಕಾರಿಗಳು ತಮ್ಮ ಮಾತುಗಳಿಂದಲೇ ಜನತೆಯನ್ನುತಮ್ಮಕಡೆಗೆ ಸೆಳೆದುಕೊಂಡಿದ್ದರು. ಮೋದಿಯವರ ಅದ್ಭುತ ವಾಕ್ಚಾತುರ್ಯ ಜನತೆಯನ್ನು ಆಕರ್ಷಿಸಿತ್ತು. ಜನರುಅವರನ್ನು ಆರಾಧಿಸಲಾರಂಭಿಸಿದರು. ಅವರ ಭಾಷಣಗಳಲ್ಲಿ ಬರುವ ಸುಳ್ಳು ಮತ್ತು ತಪ್ಪುಗಳನ್ನು ಕಣ್ಣು ಮುಚ್ಚಿ ನಂಬುತಿದ್ದಾರೆ. ಇದು ಯಶಸ್ವಿ Propagandaದ ಲಕ್ಷಣ. ಅವರ ಭಾಷಣ ಕೋಟ್ಯಾಂತರ ಜನರ ಮೇಲೆ ಪ್ರಭಾವ ಬೀರುತ್ತದೆ.
ನಮ್ಮ ನಾಯಕರ ಭಾಷಣಗಳು ನಮಗೆ ತರ್ಕ ಬದ್ಧವಾಗಿದೆ ಎಂದು ಅನ್ನಿಸಿದರೂ ಅಲ್ಲಿ ಸೈದ್ಧಾಂತಿಕವಾದ ತರ್ಕ ಶೂನ್ಯವಾಗಿರುತ್ತದೆ. ಇದಕ್ಕೆ ಅಧ್ಯಯನದ ಕೊರತೆಯೇ ಕಾರಣ. ವಾಜಪೇಯಿ, ಲೋಹಿಯಾ, ನೆಹರು ಮೊದಲಾದ ನಮ್ಮ ಹಿರಿಯ ನಾಯಕರು ಅಧ್ಯಯನಶೀಲರೂ, ಬರಹಗಾರರೂ ಆಗಿದ್ದಾರೆ. ಇಂದಿನ ನಾಯಕರ ಜ್ಞಾನದ ಮಟ್ಟ ಕುಸಿದಿದ್ದು ಅವರಾಡುವ ಮಾತುಗಳು ಅದನ್ನು ತೋರಿಸುತ್ತವೆ. ಇದಕ್ಕೆ ನಮ್ಮ ಪ್ರಧಾನಿಗಳೂ ಹೊರತಾಗಿಲ್ಲ. ಅವರುತಮ್ಮ ಅನೇಕ ಭಾಷಣಗಳಲ್ಲಿ ಗಣಪತಿಯನ್ನು ಪ್ಲಾಸ್ಟಿಕ್ ಸರ್ಜರಿಯ ಉತ್ಪನ್ನಎಂದೆಲ್ಲಾ ಕರೆದು ಪುರಾಣಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ. ಇದೇ pseudo scienceನ್ನುತ್ರಿಪುರದ ಮುಖ್ಯಮಂತ್ರಿ ಬಿಪ್ಲವ್ದೇವ್ ಮೊದಲಾದವರು ಹರಡುತ್ತಿದ್ದಾರೆ! ಜವಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಹೇಳಿಕೆಗಳನ್ನು ನೀಡುವಾಗ ಯೋಚಿಸಬೇಕು. ಜನತೆ ಅವರ ಮಾತುಗಳನ್ನು ಕೇಳುತ್ತಾರೆ ಎಂಬುದನ್ನು ಮರೆಯಬಾರದು.
ಇಂದು ದೇಶ ಒಂದು ತೆರನಾದ ಉನ್ಮಾದದಿಂದ ತುಂಬಿದೆ. ನಮ್ಮನ್ನಾಳುವ ನಾಯಕರ ಮಾತುಗಳು ಎಷ್ಟು ಸತ್ಯ ಎಂದು ಯೋಚಿಸುವ ಗೋಜಿಗೆ ನಾವು ಹೋಗುತ್ತಿಲ್ಲ. ಸುಳ್ಳು ಮಾಹಿತಿಗಳನ್ನು ಸತ್ಯದ ತಲೆಗೆ ಹೊಡೆದಂತೆ ರಾಜಕಾರಣಿಗಳು ಹರಡುತ್ತಿದ್ದಾರೆ. ಸ್ವತಃ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇತ್ತೀಚೆಗೆ ಗಾಲಿ ಜನಾರ್ದನರೆಡ್ಡಿಯವರು ಸಿದ್ದರಾಮಯ್ಯನವರ ಮಗನ ಸಾವು ದೇವರು ಕೊಟ್ಟ ಶಿಕ್ಷೆ ಎಂದು ಹೇಳಿದ್ದಾರೆ. ಸಂವೇದನೆ- ಮಾನವೀಯತೆಇಲ್ಲದ ನಾಯಕ ತನ್ನನ್ನು ನಂಬಿರುವ ಪ್ರಜೆಗಳನ್ನು ಹೇಗೆ ಸಲಹಬಲ್ಲ? ಇಂದು ನಮ್ಮ ಅನೇಕ ನಾಯಕರ ಮನಸ್ಸು ದ್ವೇಷವನ್ನು ಹರಡಲು ತುಡಿಯುತ್ತಿದೆ. ಸುಳ್ಳು ಹೇಳುವ ನಾಯಕರಿಂದ ನಾವು ಏನನ್ನು ನಿರೀಕ್ಷಿಸಬಹುದು?
ರಾಜಕಾರಣದ ಭಾಷೆ ಕಲುಷಿತಗೊಂಡಿದೆ. ನಾಯಕರ ಮಾತುಗಳು ಗಾಂಭಿರ್ಯವನ್ನು ಕಳೆದುಕೊಂಡು ದ್ವೇಷವನ್ನು ಹರಡುತ್ತಿವೆ. ಇವರ ಭಾಷಣಗಳು ಯುವಕರ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತವೆ. ಅನೇಕ ಹಿರಿಯ ರಾಜಕಾರಣಿಗಳ ಭಾಷಣಗಳನ್ನು ಯುಟ್ಯೂಬ್ನಲ್ಲಿ ಕೇಳುವಾಗ ಅಚ್ಚರಿಯಾಗುತ್ತದೆ. ಅವರ ಭಾಷೆಯ ಪ್ರೌಢಿಮೆ, ಟೀಕಿಸುವಾಗಇರುವ ಸಭ್ಯತೆ ಇಂದಿನ ನಾಯಕರಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ!
ಭಾಷೆ ಮತ್ತು ಸಂಸ್ಕøತಿ ಒಂದೇ ನಾಣ್ಯದಎರಡು ಮುಖಗಳಿದ್ದಂತೆ. ನಾವಾಡುವ ಮಾತುಗಳು ನಮ್ಮ ಸಂಸ್ಕøತಿಯನ್ನು ತೊರಿಸುತ್ತದೆ.
ಮಾನ್ಯ ಪ್ರಧಾನಿಗಳು ಹಿಂದೊಮ್ಮೆ ರಾಹುಲ್ಗಾಂಧಿಯವರು ಮಾಡಿದ ಭಾಷಣದಲ್ಲಿ ತಪ್ಪಾಗಿ ಕನ್ನಡ ಮಾತನಾಡಿದ್ದನ್ನು ವ್ಯಂಗ್ಯ ಮಾಡಿದ್ದರು. ಇದು ಓರ್ವ ಪ್ರಧಾನಿಯಿಂದ ನಿರೀಕ್ಷಿಸಲೂ ಸಾಧ್ಯವಿಲ್ಲ. ಮೋದಿಯವರು ವಿಶ್ವೇಶ್ವರಯ್ಯನವರ ಹೆಸರನ್ನುಉಚ್ಚರಿಸಲು ರಾಹುಲ್ ಗಾಂಧಿಯವರಿಗೆ ಸವಾಲು ಹಾಕಿದರು. ಅವರ ಅಭಿಮಾನಿಗಳೂ ರಾಹುಲ್ಗಾಂಧಿಯವರು ಹೇಳಿದ ಬಸವಣ್ಣನ ವಚನವನ್ನು ತಿಂಗಳುಗಟ್ಟಲೆ ಟ್ರೋಲ್ ಮಾಡಿದರು. ಕೆಲವು ದಿನಗಳ ನಂತರ ಸ್ವತಃ ಮೋದಿಯವರು ಚಾಮರಾಜನಗರದ ಸಮಾವೇಶದಲ್ಲಿ ಮಲೆಮಾದೇಶ್ವರ, ಚಾಮರಾಜ ಮೊದಲಾದ ಪದಗಳನ್ನು ತಪ್ಪುತಪ್ಪಾಗಿ ಉಚ್ಚರಿಸಿದರು. ಇದೂ ಟ್ರೋಲ್ಗೆ ಒಳಗಾಯಿತು. ಆದರೆ ಓರ್ವ ತನಗೆ ಬಾರದ ಭಾಷೆಯಲ್ಲಿ ಮಾತನಾಡುವಾಗ ಆಗುವ ತಪ್ಪುಗಳನ್ನು ಹಾಸ್ಯ ಮಾಡುವುದು ಪ್ರಧಾನಿ ಪೀಠದಲ್ಲಿರುವವರಿಗೆ ಶೋಭೆಯಲ್ಲ.
ಇತ್ತೀಚಿನ ದಿನಗಳಲ್ಲಿ ಒಂದೊಳ್ಳೆಯ ಚುನಾವಣಾ ಭಾಷಣವನ್ನು, ಸಂದರ್ಶನವನ್ನು ಕೇಳಲು ಸಾಧ್ಯವೇ ಇಲ್ಲಅನ್ನಿಸುತ್ತದೆ. ಕೇಂದ್ರ ಸಚಿವರಂತು ಮಾಧ್ಯಮಗಳಿಗೆ ಸಂದರ್ಶನ ನೀಡುವುದನ್ನು ನಿಲ್ಲಿಸಿದಂತಿದೆ!
ಚುನಾವಣೆಗಳ ಪರ್ವ ಆರಂಭವಾಗಿದೆ. ಹೊಸ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಎಲ್ಲಾ ಪಕ್ಷಗಳಲ್ಲೂ ಅಪ್ರಬುದ್ಧ ನಾಯಕರಿದ್ದಾರೆ. ಅವರಿಗೆ ಬರೆಯಲು, ಓದಲು ಬರುತ್ತದೆಯೇ ಹೊರತು ಚಿಂತಿಸಲು ಅಲ್ಲ! ವಿವೇಚಿಸುವ ನಾಯಕ ಇನ್ನೊಬ್ಬನನ್ನು ಟೀಕಿಸುವಾಗ ಜಾಗ್ರತೆ ವಹಿಸುತ್ತಾನೆ.ತಮ್ಮ ನಾಲಗೆಗೆ ಲಗಾಮು ಹಾಕಿಕೊಂಡರೆ ಒಳ್ಳೆಯದು.
***********************************************************************
ಚರಣ್ಐವರ್ನಾಡು
ಮಂಗಳೂರು ವಿಶ್ವವಿದ್ಯಾನಿಲಯ
Charan Aivarnad

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Thank You